ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಆಗಿಲ್ಲ: ಜಮ್ಮು-ಕಾಶ್ಮೀರ ಪೊಲೀಸರು

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯಲ್ಲಿ ಭದ್ರತಾ ಲೋಪ ಉಂಟಾಗಿದೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪವನ್ನು ಜಮ್ಮು ಕಾಶ್ಮೀರ ಪೊಲೀಸರು ನಿರಾಕರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯಲ್ಲಿ ಭದ್ರತಾ ಲೋಪ ಉಂಟಾಗಿದೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪವನ್ನು ಜಮ್ಮು ಕಾಶ್ಮೀರ ಪೊಲೀಸರು ನಿರಾಕರಿಸಿದ್ದಾರೆ.

ಭದ್ರತಾ ಲೋಪದ ಹಿನ್ನೆಲೆಯಲ್ಲಿ ಶುಕ್ರವಾರದಂದು ಒಂದು ದಿನದ ಮಟ್ಟಿಗೆ ಭಾರತ್ ಜೋಡೊ ಯಾತ್ರೆಯನ್ನು ಕಾಂಗ್ರೆಸ್ ರದ್ದು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು, ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಎದುರಾಗಿಲ್ಲ. ಶಾಂತಿಯುತವಾಗಿಯೇ ಯಾತ್ರೆ ನಡೆದಿದೆ ಎಂದು ಹೇಳಿದ್ದಾರೆ.

ಒಂದು ಕಿ.ಮೀ ಬಳಿಕ ಯಾತ್ರೆ ರದ್ದು ಮಾಡುವ ನಿರ್ಧಾರದ ಬಗ್ಗೆ ಆಯೋಜಕರು ನಮಗೆ ತಿಳಿಸಿರಲಿಲ್ಲ. ಉಳಿದ ಯಾತ್ರೆ ಶಾಂತಿಯುತವಾಗಿತ್ತು. ಭದ್ರತಾ ಲೋಪ ನಡೆದೇ ಇಲ್ಲ. ನಾವು ಸಂಪೂರ್ಣ ಭದ್ರತೆ ನೀಡುತ್ತೇವೆ. ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಮತ್ತು ತಪಾಸಣೆಗೆ ಒಳಗಾದ ಜನಸಮೂಹವನ್ನು ಮಾತ್ರ ಯಾತ್ರೆಯ ಮಾರ್ಗದ ಕಡೆಗೆ ಅನುಮತಿ ನೀಡಿದ್ದಾರೆ‘ ಎಂದು ತಿಳಿಸಿದ್ದಾರೆ.

ಅಲ್ಲದೇ ಯಾತ್ರೆಯಲ್ಲಿ ದೊಡ್ಡ ಜನ ಸಮೂಹ ಸೇರುವ ಬಗ್ಗೆ ಆಯೋಜಕರಿಂದ ನಮಗೆ ಮಾಹಿತಿ ಬಂದಿರಲಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com