ಇದು ನಮ್ಮ ದೇಶದ ದುಸ್ಥಿತಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಸದ ರಾಶಿ, ಫೋಟೋ ವೈರಲ್!

ಆಧುನಿಕ ಹೈ-ಸ್ಪೀಡ್ ವಂದೇ ಭಾರತ್ ರೈಲುಗಳನ್ನು ಭಾರತದ ಪ್ರಮುಖ ನಗರಗಳ ನಡುವೆ ಓಡಿಸಲಾಗುತ್ತಿದೆ. ಇನ್ನು ವಿವಿಧ ರೈಲು ಮಾರ್ಗಗಳಲ್ಲಿ ರೈಲುಗಳ ಬಳಕೆಗೆ ಸರ್ಕಾರ ಕೆಲಸ ಮಾಡುತ್ತಿದೆ. ರೈಲು ಪ್ರಾರಂಭದಿಂದಲೂ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಾಗುತ್ತಲೇ ಇದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು

ಆಧುನಿಕ ಹೈ-ಸ್ಪೀಡ್ ವಂದೇ ಭಾರತ್ ರೈಲುಗಳನ್ನು ಭಾರತದ ಪ್ರಮುಖ ನಗರಗಳ ನಡುವೆ ಓಡಿಸಲಾಗುತ್ತಿದೆ. ಇನ್ನು ವಿವಿಧ ರೈಲು ಮಾರ್ಗಗಳಲ್ಲಿ ರೈಲುಗಳ ಬಳಕೆಗೆ ಸರ್ಕಾರ ಕೆಲಸ ಮಾಡುತ್ತಿದೆ. ರೈಲು ಪ್ರಾರಂಭದಿಂದಲೂ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಾಗುತ್ತಲೇ ಇದೆ. 

ಇದೀಗ ರೈಲಿನಲ್ಲಿ ಬಿದ್ದಿರುವ ಕಸದ ಫೋಟೋ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಭಾರತೀಯ ಆಡಳಿತ ಸೇವೆ(ಐಎಎಸ್) ಅಧಿಕಾರಿಯೊಬ್ಬರು ಹಂಚಿಕೊಂಡ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಈ ಫೋಟೋಗೆ ಇದೀಗ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 

ಐಎಎಸ್ ಅಧಿಕಾರಿ ಅವನೀಶ್ ಶರಮ್ ಟ್ವೀಟ್ ಮಾಡಿರುವ ಚಿತ್ರದಲ್ಲಿ ಖಾಲಿ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು ಮತ್ತು ಪೇಪರ್‌ಗಳು ರೈಲಿನ ನೆಲದ ಮೇಲೆ ಹರಡಿಕೊಂಡಿವೆ. ಇದೇ ವೇಳೆ ವ್ಯಕ್ತಿಯೊಬ್ಬರು ಪೊರಕೆ ಹಿಡಿದು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಯಾವ ಮಾರ್ಗದಲ್ಲಿ ಚಿತ್ರ ಕ್ಲಿಕ್ಕಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿಲ್ಲ. ವಂದೇ ಭಾರತ್ ಪ್ರಸ್ತುತ ಭಾರತದಲ್ಲಿ 8 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ್ದು 'ನಾವು ಜವಾಬ್ದಾರಿಯನ್ನು ಸ್ವೀಕರಿಸುವವರೆಗೆ ಏನೂ ಬದಲಾಗುವುದಿಲ್ಲ. ದೇಶವನ್ನು ಹೇಗೆ ಆರೋಗ್ಯವಾಗಿಡಬೇಕು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಮತ್ತೊಬ್ಬ ಬಳಕೆದಾರ, 'ನಾವು ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಮೂಲಸೌಕರ್ಯಕ್ಕಾಗಿ ಬೇಡಿಕೆ ಇಡುತ್ತೇವೆ, ಆದರೆ ನಮ್ಮ ದೇಶದ ಜನರಿಗೆ ಅದನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಅದನ್ನು ಕಾಳಜಿ ವಹಿಸಬೇಕು ಎಂದು ತಿಳಿದಿಲ್ಲ ಎಂದು ಬರೆದಿದ್ದಾರೆ.

ಅದೇ ರೀತಿಯಲ್ಲಿ ಇನ್ನೊಬ್ಬ ಬಳಕೆದಾರರು, 'ನಾವೇ ಮೂಲಭೂತ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳದ ಹೊರತು ಅಭಿವೃದ್ಧಿಯಿಂದ ಯಾವುದೇ ಪ್ರಯೋಜನವಿಲ್ಲ. ಜವಾಬ್ದಾರಿಯುತ ನಾಗರಿಕರಾಗಿರಿ!' ಅದೇ ವೇಳೆಗೆ ಮತ್ತೊಬ್ಬರು 'ತುಂಬಾ ದುರದೃಷ್ಟಕರ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com