ಮಧ್ಯಪ್ರದೇಶ-ರಾಜಸ್ಥಾನದಲ್ಲಿ 3 ಯುದ್ಧ ವಿಮಾನ ಪತನ: ಬೆಂಕಿ ಹೊತ್ತಿ ಉರಿದು ಕೆಳಗೆ ಬಿದ್ದ ಪ್ಲೇನ್​, ಓರ್ವ ಪೈಲೆಟ್​ ಸಾವು

ಒಂದೇ ದಿನದಲ್ಲಿ ವಾಯಪಡೆಯು 3 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ. ಮಧ್ಯಪ್ರದೇಶದಲ್ಲಿ ಎರಡು ಮತ್ತು ರಾಜಸ್ಥಾನದಲ್ಲಿ ಒಂದು ಯುದ್ಧ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ.
ಯುದ್ಧ ವಿಮಾನ ಪತನಗೊಂಡಿರುವುದು.
ಯುದ್ಧ ವಿಮಾನ ಪತನಗೊಂಡಿರುವುದು.

ಭರತ್​ಪುರ, ಮೊರೆನಾ: ಒಂದೇ ದಿನದಲ್ಲಿ ವಾಯಪಡೆಯು 3 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ. ಮಧ್ಯಪ್ರದೇಶದಲ್ಲಿ ಎರಡು ಮತ್ತು ರಾಜಸ್ಥಾನದಲ್ಲಿ ಒಂದು ಯುದ್ಧ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದ ಮೊರೇನಾದ ಬಳಿ 2 ಯುದ್ಧ ವಿಮಾನಗಳು ಪತನವಾಗಿದೆ. ಸುಖೋಯ್ - 30 ಹಾಗೂ ಮಿರಾಜ್ 2000 ಯುದ್ಧ ವಿಮಾನಗಳು ಪತನವಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ ಏರ್‌ಬೇಸ್‌ನಿಂದ ಹೊರಟಿದ್ದ ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ತಿಳಿದುಬಂದಿದೆ,

ಆದರೆ, ಈ ಅವಘಡಕ್ಕೆ ಕಾರಣ ಈವರೆಗೆ ತಿಳಿದುಬಂದಿಲ್ಲ. ಇನ್ನು, ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

ಎರಡೂ ಯುದ್ಧ ವಿಮಾನಗಳು ಡಿಕ್ಕಿ ಹೊಡೆದುಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಸುಖೋಯ್ - 30 ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಈ ಪೈಕಿ, ಒಬ್ಬರನ್ನು ರಕ್ಷಿಸಲಾಗಿದ್ದು, ಅವರು ಬದುಕುಳಿದಿದ್ದಾರೆ. ಅಲ್ಲದೆ, ಮಿರಾಜ್ 2000 ವಿಮಾನದಲ್ಲಿ ಒಬ್ಬರು ಪೈಲಟ್‌ ಇದ್ದು, ಅವರು ಸಹ ಬದುಕುಳಿದಿದ್ದಾರೆಂದು ತಿಳಿದುಬಂದಿದೆ.

ಈ ಇಬ್ಬರು ಪೈಲಟ್‌ಗಳಿಗೆ ಗಾಯಗಳಾಗಿದ್ದು, ಓರ್ವ ಪೈಲೆಟ್ ಸಾವನ್ನಪ್ಪಿದ್ದಾರೆಂದು ಎಂದು ವರದಿಗಳು ತಿಳಿಸಿವೆ.

ಇಬ್ಬರು ಪೈಲಟ್‌ಗಳು ಸುರಕ್ಷಿವಾಗಿರುವ ಬಗ್ಗೆ ಮೊರೆನಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಇಬ್ಬರನ್ನು ಸುರಕ್ಷಿತವಾಗಿ ಯುದ್ಧ ವಿಮಾನಗಳಿಂದ ಕಾಪಾಡಲಾಗಿದೆ ಎಂದು ತಿಳಿದುಬಂದಿದೆ.

ಯುದ್ಧ ವಿಮಾನವೊಂದರ ಅವಶೇ‍ಷ ಪತ್ತೆಯಾಗಿದ್ದು, ಮಧ್ಯ ಪ್ರದೇಶದ ಮೊರೆನಾ ಬಳಿ ಎರಡು ಯುದ್ಧ ವಿಮಾನಗಳು ಪತನವಾಗಿರುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ವಾಯುಸೇನಾ ಮುಖ್ಯಸ್ಥ ಹಾಗೂ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಪ್‌ ಅವರ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ರಾಜಸ್ಥಾನದ ಭರತ್ ಪುರದಲ್ಲಿಯೂ ಭಾರತೀಯ ಸೇನೆಯ ಫೈಟರ್ ಜೆಟ್ ಪತನಗೊಂಡಿದೆ ಎಂದು ತಿಳಿದುಬಂದಿದೆ.

ಭಾರತ್‌ಪುರದ ಸೇವರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ವೀಸಾದಲ್ಲಿ ಫೈಟರ್ ಜೆಟ್ ಪತನಗೊಂಡಿದೆ. ಹಳ್ಳಿಯ ಸಮೀಪವಿರುವ ಬಂಜರು ಭೂಮಿಯಲ್ಲಿ ಫೈಟರ್ ಜೆಟ್ ಪತನಗೊಂಡಿದ್ದು, ಫೈಟರ್ ಜೆಟ್ ಅಪಘಾತಕ್ಕೀಡಾದ ಬೆನ್ನಲ್ಲೇ ಅದು ಸ್ಫೋಟಗೊಂಡು ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಆಗ್ರಾದಿಂದ ಹೊರಟಿದ್ದ ಹೆಲಿಕಾಪ್ಟರ್ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಉಚ್ಚೈನ್ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ವರದಿಗಳು ತಿಳಿಸಿವೆ.

ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದು, ಗಾಯಗೊಂಡಿರುವ ಪೈಲಟ್ ಗಳ ಆರೋಗ್ಯ ವಿಚಾರಿಸಿದ್ದಾರೆಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತದ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ" ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com