
ಒಡಿಶಾ ಆರೋಗ್ಯ ಸಚಿವರಾಗಿದ್ದ ನಬ ದಾಸ್
ಭುವನೇಶ್ವರ್: ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿಗೆ ಗುರಿಯಾಗಿದ್ದ ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ (Odisha Minister Nab Kishore Das) ನಿಧನರಾಗಿದ್ದಾರೆ.
ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್ನ ಗಾಂಧಿ ಚಕ ಎಂಬಲ್ಲಿ ಭಾನುವಾರ ಮಧ್ಯಾಹ್ನ 12:30ಕ್ಕೆ ಪೊಲೀಸ್ ಅಧಿಕಾರಿ ಎಎಸ್ಐ ಗೋಪಾಲ್ ಚಂದ್ರ ದಾಸ್ ಸಚಿವರ ಎದೆಗೆ ಗುಂಡು ಹಾರಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಚಿಕಿತ್ಸೆ ಫಲಕಾರಿಯಾಗದೇ ಸಚಿವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಮಕರ ಮೇಳದ ವೇಳೆ ಕಾಲ್ತುಳಿತ; ಓರ್ವ ಸಾವು, 20 ಮಂದಿಗೆ ಗಾಯ
ನಬ ಕಿಶೋರ್, ಬಿಜು ಪಾಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ಪ್ರಬಲ ಸಚಿವರಲ್ಲೊಬ್ಬರಾಗಿದ್ದರು. ಸಚಿವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾರಿನಿಂದ ಕೆಳಗಿಳಿಯುವಾಗ ಈ ದಾಳಿ ನಡೆದಿತ್ತು. ನಬ ದಾಸ್ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿವೆ. ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: ಒಡಿಶಾ ಸಚಿವ ನಬ ದಾಸ್ ಮೇಲೆ 'ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿ', ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ನಬ ಕಿಶೋರ್ ದಾಸ್ ಅವರು ಇತ್ತೀಚೆಗೆ ಮಹಾರಾಷ್ಟ್ರದ ಶನಿ ಶಿಂಗನಾಪುರ ದೇವಸ್ಥಾನಕ್ಕೆ ಒಂದು ಕೋಟಿ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಲ್ಲಿದ್ದರು. ಆರೋಪಿ ಗೋಪಾಲ್ ಚಂದ್ರ ದಾಸ್ ನ್ನು ಪೊಲೀಸರು ಬಂಧಿಸಿದ್ದಾರೆ.