
ಕಾಶ್ಮೀರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ಶ್ರೀನಗರ: ಭಾರತಕ್ಕೆ ನೀಡಿದ್ದ ಭರವಸೆ ಈಡೇರಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ನಡೆದ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಶ್ರೀನಗರದ ಲಾಲ್ ಚೌಕ್ ನ ಕ್ಲಾಕ್ ಟವರ್ ನಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರೊಂದಿಗೆ ಭದ್ರತೆಯ ನಡುವೆ ಧ್ವಜಾರೋಹಣ ನೆರವೇರಿಸಿದರು. ಈ ಬಳಿಕ ಮಾತನಾಡಿದ ಅವರು ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಭಾರತಕ್ಕೆ ನೀಡಿದ್ದ ಭರವಸೆ ಈಡೇರಿದೆ. ದ್ವೇಷ ಸೋಲಲಿದೆ ಪ್ರೀತಿ ಎಂದಿಗೂ ಗೆಲ್ಲಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಭಾರತದಲ್ಲಿ ಭರವಸೆಯ ಹೊಸ ಬೆಳಗು ಮೂಡಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಲಾಲ್ ಚೌಕ್ ನಲ್ಲಿ ರಾಹುಲ್ ತಿರಂಗಾ ಹಾರಿಸಿದ್ದು ಮೋದಿಯಿಂದ: ಬಿಜೆಪಿ
ಕಳೆದ ವರ್ಷದ ಸೆ.07 ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದ ರಾಹುಲ್ ಗಾಂಧಿ 12 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶದ ಮೂಲಕ ಕಾಶ್ಮೀರ ತಲುಪಿದ್ದಾರೆ. ಸೋಮವಾರದಂದು ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಭಾರತ್ ಜೋಡೋ ಯಾತ್ರೆ ಪೂರ್ಣಗೊಳ್ಳುತ್ತದೆ. ರಾಹುಲ್ ಗಾಂಧಿ ನೇತೃತ್ವದ ತಂಡದ ಯಾತ್ರಿಗಳು ಶ್ರೀನಗರದ ನೆಹರೂ ಪಾರ್ಕ್ ನಲ್ಲಿ ತಂಗಲಿದ್ದಾರೆ.
ಸೋಮವಾರ (ಜ.30) ರಂದು 23 ರಾಜಕೀಯ ಪಕ್ಷಗಳ ನಾಯಕರೊಂದಿಗೆ ಎಸ್ ಕೆ ಸ್ಟೇಡಿಯಂ ನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ.