ಗೋರಖನಾಥ ದೇಗುಲದ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಆರೋಪಿ ಅಹ್ಮದ್ ಮುರ್ತಾಜಾಗೆ ಗಲ್ಲುಶಿಕ್ಷೆ!

ಗೋರಖ್‌ನಾಥ ದೇಗುಲದಲ್ಲಿ ಪಿಎಸಿ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಹ್ಮದ್ ಮುರ್ತಾಜಾ ಅಬ್ಬಾಸಿ ದೋಷಿ ಎಂದು ಎಟಿಎಸ್ ನ್ಯಾಯಾಲಯದ ತೀರ್ಪು ನೀಡಿದ್ದು ಗಲ್ಲು ಶಿಕ್ಷೆ ವಿಧಿಸಿದೆ.
ಅಹ್ಮದ್ ಮುರ್ತಾಜಾ ಅಬ್ಬಾಸಿ
ಅಹ್ಮದ್ ಮುರ್ತಾಜಾ ಅಬ್ಬಾಸಿ

ಲಖನೌ: ಗೋರಖ್‌ನಾಥ ದೇಗುಲದಲ್ಲಿ ಪಿಎಸಿ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಹ್ಮದ್ ಮುರ್ತಾಜಾ ಅಬ್ಬಾಸಿ ದೋಷಿ ಎಂದು ಎಟಿಎಸ್ ನ್ಯಾಯಾಲಯದ ತೀರ್ಪು ನೀಡಿದ್ದು ಗಲ್ಲು ಶಿಕ್ಷೆ ವಿಧಿಸಿದೆ. 

ವಿಶೇಷ ನ್ಯಾಯಾಧೀಶ ವಿವೇಕಾನಂದ ಶರಣ್ ತ್ರಿಪಾಠಿ ಕಳೆದ ಶನಿವಾರ ದೋಷಿ ಎಂದು ತೀರ್ಪು ನೀಡಿದ್ದು ಶಿಕ್ಷೆಯ ಅವಧಿಯ ವಿಚಾರಣೆಗೆ ನ್ಯಾಯಾಲಯವು ಜನವರಿ 30 ರಂದು ದಿನಾಂಕವನ್ನು ನಿಗದಿಪಡಿಸಿತ್ತು. ಅದರಂತೆ ಇಂದು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.

ಈ ಪ್ರಕರಣ ಸಂಬಂಧ ವಿನಯ್ ಕುಮಾರ್ ಮಿಶ್ರಾ ಅವರು 2022ರ ಏಪ್ರಿಲ್ 4ರಂದು ಗೋರಖ್‌ನಾಥ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ದಾಖಲಾದ ಪ್ರಕರಣದ ಪ್ರಕಾರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪದವೀಧರನಾದ ಅಬ್ಬಾಸಿ ಏಪ್ರಿಲ್ 3ರಂದು ಗೋರಖನಾಥ ದೇವಾಲಯದ ಸಂಕೀರ್ಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದನು. ಈ ವೇಳೆ ಚಾಕುವಿನಿಂದ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದನು.

ಈ ದಾಳಿಯಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದರು. ಅಬ್ಬಾಸಿಯನ್ನು ಇತರ ಭದ್ರತಾ ಸಿಬ್ಬಂದಿ ತಡೆದು ನಂತರ ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ತನಿಖೆ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com