ಭಾರತ್ ಜೋಡೋ ಯಾತ್ರೆ ಸಮಾರೋಪ: ಸುರಿಯುವ ಹಿಮರಾಶಿ ನಡುವೆ ರಾಹುಲ್ ಅಭಿನಂದಿಸಿದ ಖರ್ಗೆ, ವಿಡಿಯೋ

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ ಯಾತ್ರೆ' ಸಮಾರೋಪ ಸಮಾರಂಭ ನಡೆಯುತ್ತಿದ್ದು, ಸುರಿಯುವ ಹಿಮರಾಶಿ ನಡುವೆ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದಿಸಿದ್ದಾರೆ.
ರಾಹುಲ್ ಅಭಿನಂದಿಸಿದ ಖರ್ಗೆ
ರಾಹುಲ್ ಅಭಿನಂದಿಸಿದ ಖರ್ಗೆ

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ ಯಾತ್ರೆ' ಸಮಾರೋಪ ಸಮಾರಂಭ ನಡೆಯುತ್ತಿದ್ದು, ಸುರಿಯುವ ಹಿಮರಾಶಿ ನಡುವೆ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದಿಸಿದ್ದಾರೆ. ಶಾಲು ಹೊದಿಸಿ, ಪರಸ್ಪರ ಆಲಿಂಗನ ಮೂಲಕ ಕಾಂಗ್ರೆಸ್ ಯುವರಾಜನನ್ನು ಖರ್ಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ನನ್ನ ಸಹೋದರ ಕನ್ಯಾಕುಮಾರಿಯಿಂದ 4-5 ತಿಂಗಳು ನಡೆದಿದ್ದಾರೆ.  ಅವರು ಹೋದಲ್ಲೆಲ್ಲಾ ಜನರು ಅವರಿಗಾಗಿ ಮುಗಿಬಿದ್ದರು. ಏಕೆಂದರೆ ಎಲ್ಲಾ ಭಾರತೀಯರ ಹೃದಯದಲ್ಲಿ ವೈವಿಧ್ಯತೆ ಇದೆ ಎಂದರು. 

 ರಾಹುಲ್ ಗಾಂಧಿ ಕಾಶ್ಮೀರಕ್ಕೆ ಬಂದಾಗ, ವಿಶಿಷ್ಠ ಅನುಭವವಾಗಿರುವುದಾಗಿ ನನ್ನ ತಾಯಿ ಹಾಗೂ ನನಗೆ ಸಂದೇಶ ಕಳುಹಿಸಿದ್ದ. ತನ್ನ ಕುಟುಂಬ ಸದಸ್ಯರು ನನಗಾಗಿ ಕಾಯುತ್ತಿರುವುದಾಗಿ ಹೇಳಿದ ರಾಹುಲ್ , ಅವರು ಬಂದು ತಮ್ಮ ಕಣ್ಣುಗಳಲ್ಲಿ ಕಣ್ಣೀರಿನೊಂದಿಗೆ  ತಬ್ಬಿಕೊಳ್ಳುತ್ತಾರೆ ಮತ್ತು ಅವರ ನೋವು ಮತ್ತು ಭಾವನೆಗಳು ಹೃದಯವನ್ನು ಪ್ರವೇಶಿಸುತ್ತಿವೆ ಎಂದು ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಾಗಿ ತಿಳಿಸಿದರು. 

ವಿಭಜಿಸುವ ಮತ್ತು ಒಡೆಯುವ ರಾಜಕೀಯವು ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದೊಂದು ರೀತಿಯಲ್ಲಿ ಆಧ್ಯಾತ್ಮಿಕ ಯಾತ್ರೆಯೇ ಆಗಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com