ಹೈದ್ರಾಬಾದ್: ಇದಕ್ಕಿದ್ದಂತೆ ಧಗಧಗನೆ ಹೊತ್ತಿ ಉರಿದ ಬಸ್! ವಿಡಿಯೋ
ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ ಬಸ್ ವೊಂದಕ್ಕೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಹೊತ್ತಿ ಉರಿದಿದೆ. ಟಿಎಸ್ ಆರ್ ಟಿಸಿ ಬಸ್ ನಲ್ಲಿ ಈ ಅವಘಡ ಸಂಭವಿಸಿದ್ದು, ಬಸ್ ನಲ್ಲಿ ಸುಮಾರು 11 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
Published: 07th July 2023 08:02 AM | Last Updated: 07th July 2023 10:47 AM | A+A A-

ಧಗಧಗನೆ ಹೊತ್ತಿ ಉರಿದ ಬಸ್ ಚಿತ್ರ
ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ ಬಸ್ ವೊಂದಕ್ಕೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಹೊತ್ತಿ ಉರಿದಿದೆ. ಟಿಎಸ್ ಆರ್ ಟಿಸಿ ಬಸ್ ನಲ್ಲಿ ಈ ಅವಘಡ ಸಂಭವಿಸಿದ್ದು, ಬಸ್ ನಲ್ಲಿ ಸುಮಾರು 11 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬೆಂಕಿಯ ಜ್ವಾಲೆ ಇಡೀ ಬಸ್ ಗೆ ವ್ಯಾಪ್ತಿಸಿದ್ದು, ಸಂಪೂರ್ಣ ಸುಟ್ಟು ಕರಲಾಗಿದೆ. ಆದರೆ, ಪ್ರಯಾಣಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಬಸ್ ನಲ್ಲಿ ಹೊಗೆ ಬಂದ ತಕ್ಷಣ ಅವರೆಲ್ಲಾ ಹೊರಗೆ ಬಂದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ ಹೈದರಾಬಾದಿನ ಬಿಹೆಚ್ ಇಎಲ್ ನಿಂದ ವಿಜಯವಾಡ ಕಡೆಗೆ ತೆರಳುತಿತ್ತು ಎಂದು ತಿಳಿದುಬಂದಿದೆ.
#WATCH | Telangana | A TSRTC bus suddenly burst into flames in Hyderabad last night. Around 11 people were travelling on the bus at the time of the incident and they immediately got off the bus when they the smoke. No injuries were reported. Fire was doused with the help of the… pic.twitter.com/Ryk5JBxusX
— ANI (@ANI) July 7, 2023