ದೆಹಲಿಯಲ್ಲಿ ಮತ್ತೊಂದು ಬರ್ಬರ ಕೊಲೆ: ಯುವತಿಯ ತುಂಡು-ತುಂಡಾದ ದೇಹ ಪತ್ತೆ
ನವದೆಹಲಿ: ಕಳೆದ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ದೆಹಲಿಯಲ್ಲಿ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರ ತುಂಡು-ತುಂಡಾದ ದೇಹ ಪತ್ತೆಯಾಗಿದೆ.
ದೆಹಲಿ ಪೊಲೀಸರು ಇಂದು ಗೀತಾ ಕಾಲೋನಿಯ ಫ್ಲೈಓವರ್ ಬಳಿ ಮಹಿಳೆಯೊಬ್ಬಳ ದೇಹದ ಭಾಗಗಳನ್ನು ಪತ್ತೆ ಮಾಡಿದ್ದು, ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಹಾಕಲಾಗಿದೆ. ಪ್ರಸ್ತುತ ದೇಹದ ತುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಪರಮಾದಿತ್ಯ ಅವರು, 'ಎರಡು ಕಪ್ಪು ಪಾಲಿಥಿನ್ ಬ್ಯಾಗ್ ಪತ್ತೆಯಾಗಿದ್ದು, ಒಂದು ಪಾಲಿಥಿನ್ ದೇಹದ ತಲೆ ಇದ್ದು, ಇನ್ನೊಂದು ಪಾಲಿಥಿನ್ ದೇಹದ ಇತರ ಭಾಗಗಳು ಇವೆ. ಉದ್ದನೆಯ ಕೂದಲಿನ ಆಧಾರದ ಮೇಲೆ, ಅದು ಮಹಿಳೆಯ ದೇಹ ಎಂದು ನಾವು ಭಾವಿಸುತ್ತೇವೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ, 27 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಶ್ರದ್ಧಾ ವಾಲ್ಕರ್ ಅವರ ಲೈವ್-ಇನ್ ರಿಲೇಷನ್ ಫಿಪ್ ಪಾಲುದಾರ ಆಫ್ತಾಬ್ ಪೂನಾವಾಲಾ ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ಕಾಡಿನಲ್ಲಿ ಎಸೆದಿದ್ದ. ದೇಹದ ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟು ಆಕೆಯ ಗುರುತನ್ನು ಮರೆಮಾಚಲು ಆಕೆಯ ಮುಖವನ್ನು ಸುಟ್ಟು ಹಾಕಿದ್ದ.
ಆರು ತಿಂಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತು, ವಾಕರ್ ಅವರ ತಂದೆ ತಿಂಗಳುಗಟ್ಟಲೆ ಅವಳನ್ನು ಸಂಪರ್ಕಿಸಲು ವಿಫಲವಾದ ನಂತರ ಕಾಣೆಯಾದ ಕುರಿತು ದೂರು ದಾಖಲಿಸಿದ್ದರು. ಅಫ್ತಾಬ್ ಪೂನಾವಾಲಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು ಮತ್ತು ಕೊಲೆ ಮತ್ತು ಸಾಕ್ಷ್ಯನಾಶದ ಆರೋಪ ಹೊರಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ