ಬೆಂಗಳೂರಿನಲ್ಲಿ ಪ್ರತಿಪಕ್ಷಗಳ 2ನೇ ಸಭೆ: ಸೀಟು ಹಂಚಿಕೆ, ಮೈತ್ರಿಕೂಟದ ಹೆಸರಿನ ಬಗ್ಗೆ ಚರ್ಚೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ದೂರವಿಡಲು ನಿರ್ಧರಿಸಿರುವ ಪ್ರತಿಪಕ್ಷಗಳು, ಈ ಸಂಬಂಧ ಚರ್ಚಿಸಲು ಪಾಟ್ನಾ ನಂತರ ಬೆಂಗಳೂರಿನಲ್ಲಿ ಎರಡನೇ ಬಾರಿ ಸಭೆ ಸೇರುತ್ತಿವೆ....
ಪ್ರತಿಪಕ್ಷಗಳ ನಾಯಕರು
ಪ್ರತಿಪಕ್ಷಗಳ ನಾಯಕರು

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ದೂರವಿಡಲು ನಿರ್ಧರಿಸಿರುವ ಪ್ರತಿಪಕ್ಷಗಳು, ಈ ಸಂಬಂಧ ಚರ್ಚಿಸಲು ಪಾಟ್ನಾ ನಂತರ ಬೆಂಗಳೂರಿನಲ್ಲಿ ಎರಡನೇ ಬಾರಿ ಸಭೆ ಸೇರುತ್ತಿವೆ. ಈ ಬಾರಿ ಸೀಟು ಹಂಚಿಕೆ ಹಾಗೂ ಮೈತ್ರಿಕೂಟದ ಹೆಸರಿನ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಎರಡು ನಾಳೆ ನಡೆಯಲಿರುವ ವಿರೋಧ ಪಕ್ಷಗಳ ಎರಡನೇ ಸಭೆಯಲ್ಲಿ, 2024ರ ಲೋಕಸಭೆ ಚುನಾವಣೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ನಿರ್ಧರಿಸುವ ಹೊರತಾಗಿ ವಿವಿಧ ವಿಷಯಗಳ ಬಗ್ಗೆ ನಿರ್ಧರಿಸಲು ಸಂಚಾಲಕರನ್ನು ನೇಮಿಸಿ, ವಿವಿಧ ತಂಡಗಳನ್ನು ರಚಿಸುವ ಸಾಧ್ಯತೆಯಿದೆ.

ಪ್ರತಿಪಕ್ಷಗಳಲ್ಲಿಯೇ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿರುವುದರಿಂದ, ತಾನೇ ಹೊಸ ಮೈತ್ರಿಕೂಟದ  ನೇತೃತ್ವದ ವಹಿಸಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಕಾಂಗ್ರೆಸ್ ಈ ವಿಷಯದಲ್ಲಿ ಅಚಲವಾಗಿರದಿರಬಹುದು ಮತ್ತು ವಿರೋಧ ಪಕ್ಷಗಳ ಸಂಯೋಜಿತ ನಿರ್ಧಾರ ಒಪ್ಪಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿಗೆ ಯಾವುದೇ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

2024 ರ ಲೋಕಸಭೆ ಚುನಾವಣೆಯನ್ನು ಯಾವುದೇ ಒಬ್ಬ 'ನಾಯಕ ವರ್ಸಸ್ ಮೋದಿ' ನಡುವಿನ ಯುದ್ಧವನ್ನಾಗಿ ಮಾಡದೆ, ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಮತ್ತು ಅದನ್ನು 'ಮೋದಿ ವರ್ಸಸ್ ಜನರ' ಯುದ್ಧವನ್ನಾಗಿ ಮಾಡಲು ವಿರೋಧ ಪಕ್ಷಗಳು ಉತ್ಸುಕವಾಗಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರತಿಪಕ್ಷಗಳ ಸಂಚಾಲಕರನ್ನಾಗಿ ಮಾಡಲು ಕೆಲವು ಪಕ್ಷಗಳು ಪ್ರಸ್ತಾಪಿಸಿದ್ದವು ಮತ್ತು ಈ ವಿಷಯದ ಬಗ್ಗೆ ಒಮ್ಮತ ಮೂಡಿದರೆ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com