![ಸಹೋದರಿಯ ರುಂಡದೊಂದಿಗೆ ನಡೆಯುತ್ತಿರುವ ಅಣ್ಣನ ಚಿತ್ರ](http://media.assettype.com/kannadaprabha%2Fimport%2F2023%2F7%2F22%2Foriginal%2FMan_Hand_with_head.jpg?w=480&auto=format%2Ccompress&fit=max)
ಬಾರಾಬಂಕಿ: ಪುರುಷನೊಬ್ಬ ಮಹಿಳೆಯ ಕತ್ತರಿಸಿದ ರುಂಡದೊಂದಿಗೆ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಿಯಾಜ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಾರ್ಯಾದಾ ಹತ್ಯೆ ಎನ್ನಲಾಗಿದೆ.
ಆಕೆ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನದೇ ಸಮುದಾಯದ ಯುವಕನೊಬ್ಬನೊಂದಿಗೆ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ತನ್ನ ಸಹೋದರಿಯ ತಲೆಯನ್ನು ಆರೋಪಿ ರಿಯಾಜ್ ಕತ್ತರಿಸಿದ್ದಾನೆ. ಬಳಿಕ ಕತ್ತರಿಸಿದ ತಲೆಯೊಂದಿಗೆ ರಸ್ತೆಯುದ್ದಕ್ಕೂ ಯಾವುದೇ ಅಂಜಿಕೆ, ಭಯವಿಲ್ಲದೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಂತ್ರಸ್ತೆಯ ತಂದೆ ಅಶುತೋಷ್ ಮಿಶ್ರಾ ಪೊಲೀಸರಿಗೆ ದೂರು ನೀಡಿದ ನಂತರ ಆತನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ. ಸಂತ್ರಸ್ತೆ ತನ್ನದೇ ಜಾತಿ ಮತ್ತು ಧರ್ಮದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಆದಾಗ್ಯೂ, ಆಕೆಯ ಸಂಬಂಧಕ್ಕೆ ಕಿಡಿಕಾರುತ್ತಿದ್ದ ಸಹೋದರ,ಕೋಪದ ಭರದಲ್ಲಿ ತನ್ನ ಸ್ವಂತ ಸಹೋದರಿಯ ಶಿರಚ್ಛೇದನದ ಹೇಯ ಕೃತ್ಯ ಮಾಡಿದ್ದಾನೆ.
Advertisement