ಬಿಹಾರ: ಹನಿಮೂನ್ ಟ್ರಿಪ್ ವೇಳೆ ರೈಲಿನಿಂದ ನವವಿವಾಹಿತೆ ನಾಪತ್ತೆ!

ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ಪತಿ ಜತೆ ಹನಿಮೂನ್ ಗೆ ತೆರಳಿದ್ದ ನವವಿವಾಹಿತ ಮಹಿಳೆ ರೈಲಿನಿಂದ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ಪತಿ ಜತೆ ಹನಿಮೂನ್ ಗೆ ತೆರಳಿದ್ದ ನವವಿವಾಹಿತ ಮಹಿಳೆ ರೈಲಿನಿಂದ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಜುಲೈ 28 ರಂದು ಕಾಜಲ್ ಕುಮಾರಿ ಎಂಬ ಮಹಿಳೆ ತನ್ನ ಪತಿಯೊಂದಿಗೆ ನವದೆಹಲಿ-ಹೊಸ ಜಲಪೈಗುರಿ ಸೂಪರ್‌ಫಾಸ್ಟ್ ರೈಲಿನಲ್ಲಿ ಹನಿಮೂನ್ ಟ್ರಿಪ್‌ಗಾಗಿ ಡಾರ್ಜಿಲಿಂಗ್‌ಗೆ ತೆರಳುತ್ತಿದ್ದರು. ದಂಪತಿಗಳು ಬಿಹಾರದ ಮುಜಾಫರ್‌ಪುರದಿಂದ ರೈಲು ಹತ್ತಿದ್ದರು. ಆದರೆ ದಾರಿ ಮಧ್ಯಯೇ ಕಾಜಲ್ ಕುಮಾರಿ ನಾಪತ್ತೆಯಾಗಿದ್ದಾರೆ.

ನಾವು ಕೋಚ್ ಸಂಖ್ಯೆ B4 ನಲ್ಲಿ ಸೀಟ್ ಸಂಖ್ಯೆ 43 ಮತ್ತು 45 ಅನ್ನು ಕಾಯ್ದಿರಿಸಿದ್ದೇವೆ. ರೈಲು ಕಿಶನ್‌ಗಂಜ್ ರೈಲು ನಿಲ್ದಾಣವನ್ನು ತಲುಪಿದಾಗ, ನನ್ನ ಹೆಂಡತಿ ಶೌಚಾಲಯಕ್ಕೆ ಹೋದವಳು ವಾಪಸ್ ಬರಲಿಲ್ಲ. ರೈಲು ಚಲಿಸಲು ಪ್ರಾರಂಭಿಸಿದ ನಂತರ, ನಾನು ರೈಲಿನ ಪ್ರತಿ ಕೋಚ್ ನಲ್ಲೂ ಹುಡುಕಿದೆ. ಆದರೆ ಅವಳು ಸಿಗಲಿಲ್ಲ. ನಂತರ ನಾನು ಮುಜಾಫರ್‌ಪುರಕ್ಕೆ ಹಿಂತಿರುಗಿ ಘಟನೆಯ ಬಗ್ಗೆ ಜಿಆರ್‌ಪಿ ಕಿಶನ್‌ಗಂಜ್‌ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ತನ್ನ ಪತ್ನಿಯನ್ನು ಮಾದಕ ವ್ಯಸನದ ತಂಡ ಅಪಹರಿಸಿರಬಹುದು ಎಂದು ಶಂಕಿಸಿರುವ ಪತಿ, ಆಕೆಗೆ ಬೇರೆ ಯಾವುದೇ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ದೂರಿನ ಮೇರೆಗೆ ಜಿಆರ್‌ಪಿ ಅಧಿಕಾರಿಗಳು ಕಿಶನ್‌ಗಂಜ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದರೂ ಆಕೆ ಪತ್ತೆಯಾಗಿಲ್ಲ.

ದೂರುದಾರರು ಮುಜಾಫರ್‌ಪುರದ ವಿದ್ಯುತ್ ಇಲಾಖೆಯ ಉದ್ಯೋಗಿಯಾಗಿದ್ದು, ಕುರ್ಹಾನಿ ಬ್ಲಾಕ್‌ನವರು. ಆರು ತಿಂಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದ ಅವರು ಕೌಟುಂಬಿಕ ಸಮಸ್ಯೆಯಿಂದ ಮದುವೆಯಾದ ಕೂಡಲೇ ಹನಿಮೂನ್‌ಗೆ ತೆರಳಲು ಸಾಧ್ಯವಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com