ಒಡಿಶಾ ರೈಲು ಅಪಘಾತ: ರಾಶಿ-ರಾಶಿ ಹೆಣಗಳ ಮಧ್ಯೆ ಪ್ರೀತಿಪಾತ್ರರ ಹುಡುಕುವುದೇ ದೊಡ್ಡ ಸವಾಲು
ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 280ಕ್ಕೂ ಆಧಿಕ ಮಂದಿಯ ರಾಶಿ ರಾಶಿ ಹೆಣಗಳ ನಡುವೆ ಪ್ರೀತಿ ಪಾತ್ರರ ಹೆಣಗಳನ್ನು ಹುಡುಕಲು ಸಂಬಂಧಿಕರ ಹರಸಾಹಸಪಡುತ್ತಿರುವ ದೃಶ್ಯ ಮನಕಲುಕುವಂತಿದೆ.
Published: 04th June 2023 09:47 PM | Last Updated: 04th June 2023 09:47 PM | A+A A-

ಒಡಿಶಾ ತ್ರಿವಳಿ ರೈಲು ಅಪಘಾತದ ಚಿತ್ರ
ಬಹನಾಗ: ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 280ಕ್ಕೂ ಆಧಿಕ ಮಂದಿಯ ರಾಶಿ ರಾಶಿ ಹೆಣಗಳ ನಡುವೆ ಪ್ರೀತಿ ಪಾತ್ರರ ಹೆಣಗಳನ್ನು ಹುಡುಕಲು ಸಂಬಂಧಿಕರ ಹರಸಾಹಸಪಡುತ್ತಿರುವ ದೃಶ್ಯ ಮನಕಲುಕುವಂತಿದೆ.
ಶಾಲೆಯೊಂದರಲ್ಲಿ ತಾತ್ಕಾಲಿಕ ಶವಾಗಾರದಲ್ಲಿ, ದಂಪತಿಗಳು ತಮ್ಮ 22 ವರ್ಷದ ಮಗನನ್ನು ಹುಡುಕುತ್ತಿದ್ದು, ಪ್ರತೀ ಶವದ ಬಳಿ ಬಂದು ಅದರ ಬಟ್ಟೆ ತೆಗೆದು ಅದು ತಮ್ಮ ಮಗನ ಶವವೇ ಎಂದು ಪರೀಕ್ಷಿಸುವ ದೃಶ್ಯ ಮಾತ್ರ ಕಣ್ಣಂಚಲಿ ನೀರು ಬರುವಂತೆ ಮಾಡುತ್ತದೆ. ಹತ್ತಾರು ಶವಗಳ ಪರೀಕ್ಷೆ ಬಳಿಕ ಕೊನೆಗೂ ಆ ವೃದ್ಧ ದಂಪತಿ ತಮ್ಮ ಪುತ್ರನ ಶವ ಗುರುತಿಸಿದರು. ಅದೂ ಕೂಡ ಮುಖಚರ್ಯೆಯಿಂದಲ್ಲ.. ಆತ ಧರಿಸಿದ್ದ ಚಿನ್ನದ ಪೆಂಡೆಂಟ್ ನಿಂದ.. ಅಪಘಾತದಲ್ಲಿ ಆತನ ಮುಖ ಮತ್ತು ದೇಹ ಗುರುತಿಸಲಾಗದಷ್ಚು ವಿಕಾರವಾಗಿತ್ತು. ಅಂತಿಮವಾಗಿ ಆ ದಂಪತಿ ತಾವು ಮಗನಿಗೆ ಹಾಕಿದ್ದ ಚಿನ್ನದ ಸರದ ಮೂಲಕ ಆತನ ದೇಹ ಗುರುತಿಸಿದ್ದಾರೆ.
ಇದನ್ನೂ ಓದಿ: ಒಡಿಶಾ ರೈಲು ದುರಂತ: ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವರು!
ಇದೊಂದೇ ಅಲ್ಲ.. ಇಂತಹ ನೂರಾರು ದೃಶ್ಯಗಳು ಅಪಘಾತ ಸ್ಥಳದಲ್ಲಿ ಸಾಮಾನ್ಯವಾಗಿತ್ತು. ಒಡಿಶಾ ರೈಲು ದುರಂತದಲ್ಲಿ ಮಗನನ್ನು ಕಳೆದುಕೊಂಡ ತಂದೆಯು ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಾವು ಚಿಕ್ಕವರಿದ್ದಾಗ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಕಳೆದುಕೊಂಡಾಗ ಇಡೀ ಮನೆಯನ್ನೇ ಹುಡುಕುವಂತೆ, ಯಾವುದೋ ಶುಭ ಸಮಾರಂಭಗಳಿಗೆ ಹೊರಟು ನಿಂತಾಗ ಬೀರುವಿನಿಂದ ಬಟ್ಟೆಯನ್ನು ಕಿತ್ತು ಕೆಳಗೆ ಹಾಕುವಂತೆ ಈ ತಂದೆಯೊಬ್ಬರು ಶವದ ರಾಶಿಯಲ್ಲಿ ತನ್ನ ಮಗನಿದ್ದಾನೆಯೇ ಎಂದು ಹುಡುಕಾಡುತ್ತಿದ್ದಾರೆ.
ಕಣ್ಣಂಚಲ್ಲಿ ನೀರಿನ ಹನಿಗಳು, ಕಣ್ಣುಗಳು ಮಂಜಾಗುತ್ತಿದೆ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಸಂಕಟ, ಅಳು ಎಲ್ಲವೂ ಒಟ್ಟೊಟ್ಟಿಗೆ ಬರುತ್ತಿದೆ, ಮಗನನ್ನು ಕಳೆದುಕೊಂಡ ತಂದೆಯ ಪಾಡು ಹೇಳತೀರದು. ಒಡಿಶಾದಲ್ಲಿ ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತದೇಹವನ್ನು ಮುಚ್ಚಿದ ಮುಸುಕು ತೆಗೆದು ತೆಗೆದು ಹುಡುಕಿತ್ತಿದ್ದಾರೆ. ಈ ರೀತಿ ಸಾವು ಘನಗೋರವಾಗಿ, ಹೃದಯವಿದ್ರಾವಕವಾಗಿ ಅಂತ್ಯ ಆಗಬಾರದು ಎಂದೆಲ್ಲಾ ನಾವು ಹೇಳಿ ಬಿಡಬಹುದು. ಆದರೆ ಯಾರ ಬದುಕಿನ ಅಂತ್ಯ ಹೇಗೆ ಹೇಗೆ ಇರುತ್ತದೊ ಯಾರಿಗೂ ಗೊತ್ತಿಲ್ಲ.
ಇದನ್ನೂ ಓದಿ: ಬಾಲಾಸೋರ್ ರೈಲು ದುರಂತ: ಅಧಿಕೃತ ಸಾವಿನ ಸಂಖ್ಯೆಯನ್ನು ಪ್ರಶ್ನಿಸಿದ ಮಮತಾ!
ಶುಕ್ರವಾರ ಸಂಜೆ ಸರಿಸುಮಾರು 7 ಗಂಟೆಗೆ ನಡೆದ ವಿನಾಶಕಾರಿ ಘಟನೆಯಲ್ಲಿ, 12841 ಶಾಲಿಮಾರ್-ಕೋರೊಮಂಡಲ್ ಎಕ್ಸ್‌ಪ್ರೆಸ್ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಘರ್ಷಣೆಯು ಸುಮಾರು 300 ಜೀವಗಳು ಬಲಿಯಾಗಿವೆ, ಸುಮಾರು 900 ಜನರು ಗಾಯಗೊಂಡಿದ್ದಾರೆ. ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ. ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ. ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ. ಒಡಿಶಾದ ಬಾಲಸೋರ್ ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಮೂರು ರೈಲುಗಳ ಅಪಘಾತದಲ್ಲಿ ಸುಮಾರು 260ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, ಸಾವಿರ ಪ್ರಯಾಣಿಕರು ಗಾಯಗೊಂಡಿದ್ದಾರೆ.