ಕುಜದೋಷ ಇದೆಯೆಂದು ಅತ್ಯಾಚಾರ ಸಂತ್ರಸ್ತೆ ಮದುವೆಗೆ ನಕಾರ: ಹುಡುಗಿಯ ಕುಂಡಲಿ ಸಲ್ಲಿಕೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದ ಆರೋಪಿಯ ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡುವ ಸಂಬಂಧ ಸಂತ್ರಸ್ತೆಯ ಕುಂಡಲಿ (ಜಾತಕ) ಅಧ್ಯಯನ ಮಾಡುವಂತೆ ಅಲಾಹಾಬಾದ್ಹೈಕೋರ್ಟ್ಲಖನೌ ಪೀಠ ಇತ್ತೀಚೆಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ತಡೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದ ಆರೋಪಿಯ ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡುವ ಸಂಬಂಧ ಸಂತ್ರಸ್ತೆಯ ಕುಂಡಲಿ (ಜಾತಕ) ಅಧ್ಯಯನ ಮಾಡುವಂತೆ ಅಲಾಹಾಬಾದ್ಹೈಕೋರ್ಟ್ಲಖನೌ ಪೀಠ ಇತ್ತೀಚೆಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ತಡೆ ನೀಡಿದೆ.

ಸಂತ್ರಸ್ತೆಗೆ ಕುಜದೋಷವಿರುವ ಕಾರಣ ಮದುವೆಯಾಗಲು ಸಾಧ್ಯವಿಲ್ಲ ಎಂದು ಆರೋಪಿ ಗೋಬಿಂದ್ರಾಯ್ವಾದಿಸಿದ. ಆದರೆ ಆಕೆಗೆ ಅಂತಹ ದೋಷವಿಲ್ಲ ಎಂದು ಸಂತ್ರಸ್ತೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಂಡಲಿ (ಜಾತಕ) ಅಧ್ಯಯನ ಮಾಡುವಂತೆ ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಅಲಾಹಾಬಾದ್ಹೈಕೋರ್ಟ್ಸೂಚಿಸಿತ್ತು.

ಜಾಮೀನು ಅರ್ಜಿ ನಿರ್ಧರಿಸುವಾಗ ವ್ಯಕ್ತಿಯ ಖಾಸಗಿ ವಿಷಯವಾಗಿರುವ ಜ್ಯೋತಿಷ್ಯದ ಕ್ಷೇತ್ರವನ್ನು ನ್ಯಾಯಾಲಯ ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಾಗಿ ಆದೇಶಕ್ಕೆ ತಡೆ ನೀಡಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿತ್ತಲ್ಅವರಿದ್ದ ಪೀಠ ಆರೋಪಿಗಳ ಜಾಮೀನು ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ನಿರ್ಧರಿಸಲು ಹೈಕೋರ್ಟ್ಗೆ ನಿರ್ದೇಶಿಸಿತು.

"ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಪರಿಗಣಿಸಿದೆ. ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಮೇ 23 ರಂದು ಅಲಹಾಬಾದ್ ಹೈಕೋರ್ಟ್ಏಕಸದಸ್ಯ ಪೀಠ ನೀಡಿದ್ದ ಆದೇಶ ಈ ಪ್ರಕರಣದ ವಿಷಯವಾಗಿದೆ. ಅರ್ಹತೆ ಆಧಾರದಲ್ಲಿ ಯಾವುದೂ ನಿರ್ಧಾರವಾಗಿಲ್ಲ ಎಂದು ಹೇಳುತ್ತಿದ್ದೇವೆ. ಮೇ 23ರಿಂದಲೇ ಅನ್ವಯವಾಗುವಂತೆ ಆದೇಶವನ್ನು ತಡೆ ಹಿಡಿಯುತ್ತಿದ್ದೇವೆ. ಹೈಕೋರ್ಟ್ಮುಂದಿನ ವಿಚಾರಣೆ ದಿನದಂದೇ ಪ್ರಕರಣವನ್ನು ಆಲಿಸಬಹುದು ಮತ್ತು ಅದು ಅರ್ಹತೆಯ ಆಧಾರದ ಮೇಲೆ ವ್ಯವಹರಿಸಬೇಕು” ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.  

ಹಿಂದೂ ಜ್ಯೋತಿಷ್ಯದ ಪ್ರಕಾರ ಕುಜನ (ಮಂಗಳ ಗ್ರಹದ)  ಪ್ರಭಾವದಿಂದ ಜನಿಸಿದ ವ್ಯಕ್ತಿಗೆ ಕುಜದೋಷವಿದೆ ಎಂದು ಹೇಳಲಾಗುತ್ತದೆ. ಅಂತಹವರನ್ನು ಮದುವೆಯಾಗುವವರ ಜೀವಕ್ಕೆ ಸಂಚಕಾರ ಎದುರಾಗುತ್ತದೆ ಎಂಬ ಪ್ರತೀತಿ ಇದೆ.

ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಅಲಾಹಾಬಾದ್ಹೈಕೋರ್ಟ್ನ ನ್ಯಾ. ಬ್ರಿಜ್ ರಾಜ್ ಸಿಂಗ್ ಅವರ ಏಕಸದಸ್ಯ ಪೀಠವು ಮಹಿಳೆ ಮತ್ತು ಅರ್ಜಿ ಸಲ್ಲಿಸಿದ್ದ ಗೋಬಿಂದ್ರಾಯ್ಗೆ ತಮ್ಮ ಕುಂಡಲಿಗಳನ್ನು ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಅಲ್ಲದೆ ಮೂರು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯಕ್ಕೆ ಅದು ಸೂಚಿಸಿತ್ತು.

“ಸಂತ್ರಸ್ತೆಗೆ ಕುಜ ದೋಷ ಇದೆ. ಹೀಗಾಗಿ ಶಾಸ್ತ್ರೋಕ್ತವಾಗಿ ವಿವಾಹ ಸಾಧ್ಯವಾಗದೇ ಅದನ್ನು ಕೈಬಿಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಮತ್ತೊಂದೆಡೆ ಸಂತ್ರಾಸ್ತೆಯ ಪರ ವಕೀಲ ವಿವೇಕ್ ಕುಮಾರ್ ಸಿಂಗ್ ಅವರು ಸಂತ್ರಸ್ತೆಗೆ ಕುಜದೋಷವಿಲ್ಲ ಎಂದು ವಾದ ಮಂಡಿಸಿದ್ದಾರೆ. ಸಂತ್ರಸ್ತೆಗೆ ಕುಜದೋಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು  ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರು ನಿರ್ಧರಿಸಬೇಕು ಮತ್ತು  ವಿಭಾಗದ ಮುಖ್ಯಸ್ಥರಯ ಮುಚ್ಚಿದ ಲಕೋಟೆಯಲ್ಲಿ ಮೂರು ವಾರದೊಳಗೆ ಸಂಬಂಧಿಸಿದ ವರದಿ ಸಲ್ಲಿಸಬೇಕು” ಎಂದು ಪೀಠ ಹೇಳಿತ್ತು. ಹೈಕೋರ್ಟ್ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಜೂನ್ 26ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com