
ಬಾಲಸೋರ್ ರೈಲು ಅಪಘಾತ ಸ್ಥಳ
ಬಾಲಸೋರ್(ಒಡಿಶಾ): ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ಅಪಘಾತ ನಡೆದ ಸ್ಥಳದಲ್ಲಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.
ಜೆಸಿಬಿ ಯಂತ್ರಗಳ ಮೂಲಕ ಅವಶೇಷಗಳನ್ನು ತೆರವು ಮಾಡುತ್ತಿರುವುದನ್ನು ಡ್ರೋಣ್ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ನೋಡಬಹುದು. ಅವಶೇಷಗಳನ್ನು ಸಂಪೂರ್ಣ ತೆರವು ಮಾಡಿದ ಬಳಿಕ ಹಳಿಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಸಿಗಲಿದೆ.
#WATCH | Odisha: Aerial visuals from ANI’s drone camera show the restoration work underway at the site where the horrific #BalasoreTrainAccident took place. pic.twitter.com/QtLWITBMII
— ANI (@ANI) June 4, 2023
ಭಾನುವಾರ ಸಂಜೆಯವರೆಗೆ ಅವಶೇಷಗಳ ತೆರವು ಕೆಲಸ ನಡೆಯಲಿದೆ. ಆ ಬಳಿಕ ಹಳಿಗಳನ್ನು ದುರಸ್ತಿ ಮಾಡಿ ಸೋಮವಾರ ಸಂಜೆ ಅಥವಾ ಮಂಗಳವಾರ ಮಾರ್ಗವನ್ನು ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
"ದುರಂತ ಸಂಭವಿಸಿದ ಸ್ಥಳದ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ಉರುಳಿಬಿದ್ದ ಬೋಗಿಗಳು ಮತ್ತು ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ. ಸಂಪರ್ಕ ಹಳಿಗಳ ಕಾಮಗಾರಿಯೂ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ" ಎಂದು ರೈಲ್ವೆ ಇಲಾಖೆ ತಿಳಿಸಿದೆ.
"ಅಪಘಾತಕ್ಕೀಡಾದ ಬೋಗಿಗಳನ್ನು ಮತ್ತು ಗೂಡ್ಸ್ ರೈಲಿನ ಎರಡು ಬೋಗಿಗಳನ್ನು ತೆಗೆದುಹಾಕಲಾಗಿದೆ. ಒಂದು ಕಡೆಯಿಂದ ಟ್ರ್ಯಾಕ್ ಸಂಪರ್ಕಿಸುವ ಕೆಲಸ ನಡೆಯುತ್ತಿದೆ" ಎಂದು ಸ್ಥಳದಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯದ ಕುರಿತು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ ಮಾಹಿತಿ ನೀಡಿದರು.
ಮತ್ತೊಂಡೆ, ಮೃತಪಟ್ಟ ವ್ಯಕ್ತಿಗಳ ಕುಟುಂಬದವರಿಗೆ ಒಡಿಶಾ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರಧನ ಘೋಷಿಸಿದೆ.