ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಅಸ್ತು

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಬುಧವಾರ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಮಾಡಲು ಅನುಮತಿ ನೀಡಿದೆ. ಇನ್ನೂ ಮಳೆಗಾಲ ಆರಂಭವಾಗಬೇಕಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಬುಧವಾರ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಮಾಡಲು ಅನುಮತಿ ನೀಡಿದೆ. ಇನ್ನೂ ಮಳೆಗಾಲ ಆರಂಭವಾಗಬೇಕಿದೆ.

ಭತ್ತಕ್ಕೆ (ಸಾಮಾನ್ಯ ತಳಿ) ಎಂಎಸ್‌ಪಿ ದರವನ್ನು ಕ್ವಿಂಟಾಲ್‌ಗೆ 2,040 ರೂ.ನಿಂದ 2,183 ರೂ.ಗೆ ಹೆಚ್ಚಿಸಲಾಗಿದೆ. ಗ್ರೇಡ್ ಎ ತಳಿಗೆ 2,060 ರೂ.ನಿಂದ 2,203 ರೂ.ಗೆ ಏರಿಕೆ ಮಾಡಲಾಗಿದೆ. ಬಾಜ್ರಾಗೆ ಎಂಎಸ್‌ಪಿಯನ್ನು 2,350 ರೂ. ನಿಂದ 2,500 ರೂ.ಗೆ ಹೆಚ್ಚಿಸಲಾಗಿದ್ದರೆ, ರಾಗಿಗೆ 3,578 ರಿಂದ 3,846 ರೂ.ಗೆ ಏರಿಕೆ ಮಾಡಲಾಗಿದೆ. 

ದ್ವಿದಳ ಧಾನ್ಯಗಳಾದ ತೊಗರಿಗೆ ಕನಿಷ್ಠ ಬೆಂಬಲ ಬೆಲೆಯನ್ನು 6,600 ರೂ.ನಿಂದ 7,000 ರೂ.ಗೆ ಹೆಚ್ಚಿಸಲಾಗಿದೆ. , ಹೆಸರು ಕಾಳು ಬೆಳೆಗೆ 7,755 ರಿಂದ 8,558 ರೂ.ಗೆ ಮತ್ತು ಉದ್ದಿನ ಕಾಳು ಬೆಳೆಗೆ 6,600 ರೂ.ನಿಂದ 6,950 ರೂ.ಗೆ ಹೆಚ್ಚಿಸಲಾಗಿದೆ.

ಭಾರತವು ಬೇಸಿಗೆ, ಖಾರಿಫ್ ಮತ್ತು ರಬಿ ಎಂಬ ಮೂರು ಬೆಳೆ ಋತುಗಳನ್ನು ಹೊಂದಿದೆ. ಜೂನ್-ಜುಲೈನಲ್ಲಿ ಬಿತ್ತಿದ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಕೊಯ್ಲು ಮಾಡಿದ ಬೆಳೆಗಳನ್ನು ಖಾರಿಫ್ ಬೆಳೆಗಳು ಎನ್ನಲಾಗುತ್ತದೆ.

ಇದೀಗ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಿರುವುದು ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುತ್ತದೆ ಎಂದು ಸರ್ಕಾರ ನಂಬಿದ್ದು, ಸರ್ಕಾರವು ತನ್ನ ಏಜೆನ್ಸಿಗಳ ಮೂಲಕ ಕಾಲಕಾಲಕ್ಕೆ ರೈತರಿಂದ ಬೆಳೆಗಳನ್ನು ಬೆಂಬಲ ಬೆಲೆ ನೀಡಿ ಸಂಗ್ರಹಿಸುತ್ತದೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್, 2022-23ರ ಕೃಷಿ ವರ್ಷಕ್ಕೆ ಒಟ್ಟು ಆಹಾರ ಧಾನ್ಯ ಉತ್ಪಾದನೆಯನ್ನು 330.5 ಮಿಲಿಯನ್ ಟನ್‌ಗಳಿಗೆ ನಿರೀಕ್ಷಿಸಲಾಗಿದೆ ಎಂದು ಪುನರುಚ್ಚರಿಸಿದರು.

2022-23ರ ಮೂರನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರಧಾನ್ಯ ಉತ್ಪಾದನೆಯು ದಾಖಲೆಯ 330.5 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷ 2021-22ಕ್ಕೆ ಹೋಲಿಸಿದರೆ 14.9 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ. ಇದು ಕಳೆದ ಐದು ವರ್ಷಗಳಲ್ಲಿಯೇ ಗರಿಷ್ಠ ಏರಿಕೆಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com