ಪಾಟ್ನಾದಲ್ಲಿ ಜೂನ್ 23ಕ್ಕೆ ವಿಪಕ್ಷಗಳ ಸಭೆ: ರಾಹುಲ್, ಮಮತಾ, ಕೇಜ್ರಿವಾಲ್, ಸ್ಟಾಲಿನ್ ಭಾಗಿ- ತೇಜಸ್ವಿ ಯಾದವ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವ ನಿಟ್ಟಿನಲ್ಲಿ ವಿಪಕ್ಷಗಳ ಮೈತ್ರಿಕೂಟ ರಚನೆ ಕಸರತ್ತು ಬಿರುಸಿನಿಂದ ಸಾಗಿದ್ದು, ಪಾಟ್ನಾದಲ್ಲಿ ಜೂನ್ 23 ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 'ವಿಪಕ್ಷಗಳ ಸಭೆ'' ಆಯೋಜಿಸಿದ್ದಾರೆ.
ಮಮತಾ, ರಾಹುಲ್, ಕೇಜ್ರಿವಾಲ್, ಸ್ಟಾಲಿನ್
ಮಮತಾ, ರಾಹುಲ್, ಕೇಜ್ರಿವಾಲ್, ಸ್ಟಾಲಿನ್
Updated on

ಪಾಟ್ನಾ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವ ನಿಟ್ಟಿನಲ್ಲಿ ವಿಪಕ್ಷಗಳ ಮೈತ್ರಿಕೂಟ ರಚನೆ ಕಸರತ್ತು ಬಿರುಸಿನಿಂದ ಸಾಗಿದ್ದು, ಪಾಟ್ನಾದಲ್ಲಿ ಜೂನ್ 23 ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 'ವಿಪಕ್ಷಗಳ ಸಭೆ'' ಆಯೋಜಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬುಧವಾರ ತಿಳಿಸಿದರು.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಜೊತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಈ ಹಿಂದೆ ಜೂನ್ 12 ರಂದು ಸಭೆ ನಡೆಸಲು ಉದ್ದೇಶಿಸಲಾಗಿತ್ತು.ಆದರೆ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಕೆಲವೊಂದು ಪಕ್ಷಗಳ ದಿನಾಂಕ ಬದಲಾವಣೆಗೆ ಮನವಿ ಮಾಡಿದ್ದರಿಂದ ಸಭೆಯನ್ನು ಜೂನ್ 23ಕ್ಕೆ ಮುಂದೂಡಲಾಗಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಗೆ ಕಾರ್ಯತಂತ್ರ ರೂಪಿಸುವ ಸಭೆಗೆ ಪಕ್ಷಗಳು ತಮ್ಮ ಮುಖ್ಯಸ್ಥರನ್ನು ಹೊರತುಪಡಿಸಿ ಯಾವುದೇ ನಾಯಕರನ್ನು ಕಳುಹಿಸುವುದನ್ನು ವಿರೋಧಿಸುವುದಾಗಿ ನಿತೀಶ್ ಕುಮಾರ್ ಇತ್ತೀಚೆಗೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com