ಆಹ್ವಾನ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ ನಿವಾಸಕ್ಕೆ ಭಜರಂಗ್​ ಪೂನಿಯಾ, ಸಾಕ್ಷಿ ಮಲ್ಲಿಕ್​ ಭೇಟಿ

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್​ಐ)ದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಪದಕ ವಿಜೇತ ಕುಸ್ತಿಪಟುಗಳಾದ ಭಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲ್ಲಿಕ್​ ಅವರು, ಬುಧವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ.
ಅನುರಾಗ್ ಠಾಕೂರ್ ನಿವಾಸಕ್ಕೆ ತೆರಳುತ್ತಿರುವ ಕುಸ್ತಿಪಟುಗಳು.
ಅನುರಾಗ್ ಠಾಕೂರ್ ನಿವಾಸಕ್ಕೆ ತೆರಳುತ್ತಿರುವ ಕುಸ್ತಿಪಟುಗಳು.

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್​ಐ)ದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಪದಕ ವಿಜೇತ ಕುಸ್ತಿಪಟುಗಳಾದ ಭಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲ್ಲಿಕ್​ ಅವರು, ಬುಧವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ.

ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದ ಅನುರಾಗ್ ಠಾಕೂರ್ ಅವರು, ಮಾತುಕತೆಗೆ ಕುಸ್ತಿಪಟುಗಳಿಗೆ ಆಹ್ವಾನ ನೀಡಿದ್ದರು.

ಆಹ್ವಾನ ಬೆನ್ನಲ್ಲೇ ಇದೀಗ ಭಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲ್ಲಿಕ್​ ಅವರು, ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಕಳೆದ ಶನಿವಾರ ಕುಸ್ತಿಪಟುಗಳು ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡಿ ಬ್ರಿಜ್​ ಭೂಷಣ್​ ಲೈಂಗಿಕ ದೌರ್ಜನ್ಯದ ವಿರುದ್ಧ ಚರ್ಚಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಭಜರಂಗ್​ ಪೂನಿಯಾ ಅವರು, ನಮ್ಮ ಪ್ರತಿಭಟನಾ ಚಳುವಳಿಯು ಇನ್ನೂ ನಿಂತಿಲ್ಲ. ಅದು ಮುಂದುವರಿದಿದೆ. ಅದನ್ನು ಹೇಗೆ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂದು ಚರ್ಚಿಸುತ್ತಿದ್ದೇವೆ. ಬ್ರಿಜ್​ ಸಿಂಗ್​ ವಿರುದ್ಧದ ತನಿಖೆಯು ಪ್ರಗತಿಯಲ್ಲಿದೆ ಎಂದು ಅಮಿತ್​ ಶಾ ಅವರು ಹೇಳಿದ್ದಾರೆ. ಸರ್ಕಾರದ ಪ್ರತಿಕ್ರಿಯೆಯು ನಮಗೆ ತೃಪ್ತಿದಾಯಕವಾಗಿಲ್ಲ ಮತ್ತು ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com