ಒಡಿಶಾ ರೈಲು ದುರಂತ: ಬಿಹಾರದ 19 ಪ್ರಯಾಣಿಕರು ನಾಪತ್ತೆ, 50 ಸಾವು- ವಿಪತ್ತು ನಿರ್ವಹಣಾ ಇಲಾಖೆ
ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನ ಸಾವನ್ನಪ್ಪಿದ್ದು, ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ...
Published: 08th June 2023 03:34 PM | Last Updated: 08th June 2023 06:59 PM | A+A A-

ರೈಲು ಅಪಘಾತದ ಸ್ಥಳ
ಪಾಟ್ನಾ: ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನ ಸಾವನ್ನಪ್ಪಿದ್ದು, ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ(ಡಿಎಂಡಿ) ತಿಳಿಸಿದೆ.
ನಾಪತ್ತೆಯಾದ ಬಿಹಾರದ 19 ಪ್ರಯಾಣಿಕರ ಪೈಕಿ ಮಧುಬನಿ ಜಿಲ್ಲೆಯ ನಾಲ್ವರು, ದರ್ಭಾಂಗಾ ಜಿಲ್ಲೆಯ ಇಬ್ಬರು, ಮುಜಾಫರ್‌ಪುರದ ಇಬ್ಬರು, ಪೂರ್ವ ಚಂಪಾರಣ್ ಜಿಲ್ಲೆಯ ಇಬ್ಬರು, ಸಮಸ್ತಿಪುರದ ಇಬ್ಬರು, ಸಿತಾಮರ್ಹಿಯ ಒಬ್ಬರು, ಪಾಟ್ನಾದ ಒಬ್ಬರು ಹಾಗೂ ಗಯಾದ ಒಬ್ಬರು, ಪೂರ್ಣಿಯಾದ ಒಬ್ಬರು, ಶೇಖ್‌ಪುರದ ಒಬ್ಬರು, ಸಿವಾನ್ ನ ಒಬ್ಬರು ಮತ್ತು ಬೇಗುಸರಾಯ್ ಒಬ್ಬರು ಸೇರಿದ್ದಾರೆ. ಎಂದು ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಒಡಿಶಾ ರೈಲು ಅಪಘಾತದಲ್ಲಿ ಬಿಹಾರದ ವಿವಿಧ ಜಿಲ್ಲೆಗಳ ಕನಿಷ್ಠ 50 ಜನ ಸಾವನ್ನಪ್ಪಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
ಇದನ್ನು ಓದಿ: ಮೃತದೇಹಗಳ ಗುರುತು ಪತ್ತೆ ಸವಾಲು; 33 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ದೆಹಲಿಗೆ ಕಳುಹಿಸಿದ ಒಡಿಶಾ ಸರ್ಕಾರ
ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಬಿಹಾರದ 50 ಜನರಲ್ಲಿ ಒಂಬತ್ತು ಮಂದಿ ಮುಜಾಫರ್‌ಪುರ ಜಿಲ್ಲೆಯವರು, ಮಧುಬನಿ (6), ಭಾಗಲ್‌ಪುರ (7), ಪೂರ್ವ ಚಂಪಾರಣ್ (5), ಪೂರ್ಣಿಯಾ (2), ಪಶ್ಚಿಮ ಚಂಪಾರಣ್ (3), ನಾವಡಾ (2) , ದರ್ಬಂಗಾ (2), ಜಮುಯಿ (2), ಸಮಸ್ತಿಪುರ್ (3), ಬಂಕಾ (1), ಬೆವ್ಗುಯಿಸಾರೈ (1), ಗಯಾ (1), ಖಗರಿಯಾ (3), ಶರ್ಷಾ (1), ಸಿತಾಮರ್ಹಿ (1) ಮತ್ತು ಮುಂಗೇರ್ ಜಿಲ್ಲೆಯ ಒಬ್ಬರು ಎಂದು ಪ್ರಕಟಣೆ ಹೇಳಿದೆ.