NEET ಫಲಿತಾಂಶ 2023: 720 ಅಂಕಗಳೊಂದಿಗೆ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ!

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ NEET ಫಲಿತಾಂಶ 2023ರಲ್ಲಿ, ಇಬ್ಬರು ವಿದ್ಯಾರ್ಥಿಗಳಾದ ಪ್ರಬಂಜನ್ ಜೆ ಮತ್ತು ಬೋರಾ ವರುಣ್ ಚಕ್ರವರ್ತಿ 720 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸಾಂದರ್ಭಿಕ ದೃಶ್ಯ
ಸಾಂದರ್ಭಿಕ ದೃಶ್ಯ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ NEET ಫಲಿತಾಂಶ 2023ರಲ್ಲಿ, ಇಬ್ಬರು ವಿದ್ಯಾರ್ಥಿಗಳಾದ ಪ್ರಬಂಜನ್ ಜೆ ಮತ್ತು ಬೋರಾ ವರುಣ್ ಚಕ್ರವರ್ತಿ 720 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕದ ಧ್ರುವ ಅಡ್ವಾಣಿ 5ನೇ Rank ಪಡೆದಿದ್ದಾರೆ.

ವೈದ್ಯಕೀಯ ಕಾಲೇಜುಗಳಲ್ಲಿನ ವಿವಿಧ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ NEET ಯುಜಿ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು neet.nta.nic.in ಮತ್ತು ntaresults.nic.in ನಲ್ಲಿ ಪರಿಶೀಲಿಸಬಹುದಾಗಿದೆ.

NEET UG 2023ರ ಟಾಪ್-20 ಅಂಕ ಹೊಂದಿರುವವರ ಪಟ್ಟಿ

1 Rank: ಪ್ರಬಂಜನ್ ಜೆ, ಬೋರಾ ವರುಣ್ ಚಕ್ರವರ್ತಿ (720 ಅಂಕ)
3: ಕೌಸ್ತವ್ ಬೌರಿ (716)
4: ಪ್ರಾಂಜಲ್ ಅಗರ್ವಾಲ್ (715)
5: ಧ್ರುವ ಅಡ್ವಾಣಿ (715)
6: ಸೂರ್ಯ ಸಿದ್ಧಾರ್ಥ್ ಎನ್ (715)
7: ಶ್ರೀನಿಕೇತ್ ರವಿ (715)
8: ಸ್ವಯಂ ಶಕ್ತಿ ತ್ರಿಪಾಠಿ (715)
9: ವರುಣ್ ಎಸ್ (715)
10: ಪಾರ್ಥ್ ಖಂಡೇಲ್ವಾಲ್ (715)
11: ಆಶಿಕಾ ಅಗರ್ವಾಲ್ (715)
12: ಸಿಯಾನ್ ಪ್ರಧಾನ್ (715)
13: ಹರ್ಷಿತ್ ಬನ್ಸಾಲ್ (715)
14: ಶಶಾಂಕ್ ಕುಮಾರ್ (715)
15: ಕಾಂಚನ್ ಗಾಯಂತ್ ರಘು ರಾಮ ರೆಡ್ಡಿ (715)
16: ಶುಭಂ ಬನ್ಸಾಲ್ (715)
17: ಭಾಸ್ಕರ್ ಕುಮಾರ್ (715)
18: ದೇವ್ ಭಾಟಿಯಾ (715)
19: ಅರ್ನಾಬ್ ಪತಿ (715)
20: ಶಶಾಂಕ್ ಸಿನ್ಹಾ (715)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com