ಜಾಗತಿಕ ಆಸ್ತಿ: 'ಭಾರತದ ಜೇಮ್ಸ್ ಬಾಂಡ್' ಅಜಿತ್ ಧೋವಲ್ ಗೆ ಅಮೆರಿಕ ಮೆಚ್ಚುಗೆ!

ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತರಾಗಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಬಗ್ಗೆ ಅಮೆರಿಕ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರು ಜಾಗತಿಕ ಆಸ್ತಿ ಎಂದು ಬಣ್ಣಿಸಿದೆ.
ಅಜಿತ್ ಧೋವಲ್-ಎರಿಕ್ ಗಾರ್ಸೆಟ್ಟಿ
ಅಜಿತ್ ಧೋವಲ್-ಎರಿಕ್ ಗಾರ್ಸೆಟ್ಟಿ
Updated on

ನವದೆಹಲಿ: ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತರಾಗಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಬಗ್ಗೆ ಅಮೆರಿಕ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರು ಜಾಗತಿಕ ಆಸ್ತಿ ಎಂದು ಬಣ್ಣಿಸಿದೆ.

ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಮಂಗಳವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು "ಅಂತರರಾಷ್ಟ್ರೀಯ ಸಂಪತ್ತು" ಎಂದು ಹೊಗಳಿದ್ದಾರೆ.

ದೆಹಲಿಯಲ್ಲಿ ನಡೆದ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ) ಕುರಿತು ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಉಪಕ್ರಮ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲೋ ಉತ್ತರಾಖಂಡದ ಹಳ್ಳಿಯ ಹುಡುಗನಾಗಿ ಬೆಳೆದ ಅಜಿತ್ ದೋವಲ್ ಇಂದು ತಮ್ಮ ಅಪ್ರತಿಮ ಶೌರ್ಯ ಮತ್ತು ಕೆಲಸಗಳಿಂದಾಗಿ ಜಾಗತಿಕ ಆಸ್ತಿಯಾಗಿದ್ದಾರೆ. ಅವರು ಕೇವಲ ಭಾರತದ ರಾಷ್ಟ್ರೀಯ ಭದ್ರತಾಸಲಹೆಗಾರರಾಗಿ ಉಳಿದಿಲ್ಲ.. ಇಂದು ಅವರು ಅಂತಾರಾಷ್ಟ್ರೀಯ ಸಂಪತ್ತಾಗಿದ್ದಾರೆ ಎಂದು ಹೊಗಳಿದ್ದಾರೆ.

ಅಮೆರಿಕ ಮತ್ತು ಭಾರತದ ನಡುವಿನ ಬಲವಾದ ಅಡಿಪಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ನಾನು ಅಮೆರಿಕ ಮತ್ತು ಭಾರತದ ನಡುವಿನ ಅಡಿಪಾಯವನ್ನು ನೋಡಿದಾಗ, ಅದು ತುಂಬಾ ಪ್ರಬಲವಾಗಿದೆ, ಭಾರತೀಯರು ಅಮೆರಿಕನ್ನರನ್ನು ಪ್ರೀತಿಸುತ್ತಾರೆ ಮತ್ತು ಅಮೆರಿಕನ್ನರು ಭಾರತೀಯರನ್ನು ಪ್ರೀತಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ" ಎಂದು  ಗಾರ್ಸೆಟ್ಟಿ ಹೇಳಿದರು. 

ಇದೇ ವೇಳೆ ಡಿಜಿಟಲ್ ಪಾವತಿ ಮತ್ತು ಹಣಕಾಸು ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದ ಅವರು, "ನಾನು ಡಿಜಿಟಲ್ ಪಾವತಿ ಮತ್ತು ಭಾರತ ಹೊಂದಿರುವ ಹಣಕಾಸು ತಂತ್ರಜ್ಞಾನವನ್ನು ನೋಡಿದಾಗ, ಅದು ಜಗತ್ತನ್ನು ಬೆಚ್ಚಿಬೀಳಿಸುತ್ತದೆ. ಹಳ್ಳಿಯಲ್ಲಿರುವ 'ಟೀ ವಾಲಾ' ಗಳೂ ಕೂಡ ಇಂದು ಡಿಜಿಟಲ್ ಪಾವತಿಮೊರೆ ಹೋಗಿದ್ದಾರೆ.  ನಾವು 4G, 5G ಮತ್ತು 6G ಬಗ್ಗೆ ಈ ಎಲ್ಲಾ ಮಾತುಕತೆಗಳನ್ನು ಕೇಳುತ್ತೇವೆ, ಆದರೆ ಇಲ್ಲಿ ಭಾರತದಲ್ಲಿ ಅದಕ್ಕಿಂತ ಹೆಚ್ಚು ಶಕ್ತಿಯುತವಾದ ತಂತ್ರಜ್ಞಾನ ವ್ಯವಸ್ಥೆ ಹೊಂದಿದ್ದೇವೆ ಎಂದು ಅವರು ಹೇಳಿದರು.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಮಂಗಳವಾರ ತಮ್ಮ ಭಾರತೀಯ ಸಹವರ್ತಿ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಸುಲ್ಲಿವಾನ್ ಅವರ ಭೇಟಿಯ ಸಂದರ್ಭದಲ್ಲಿ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಅಮೆರಿಕ ಉದ್ಯಮದ ನಾಯಕರ ನಿಯೋಗ ಕೂಡ ಇತ್ತು. ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ಅಮೆರಿಕ ಪ್ರವಾಸದ ಪೂರ್ವದಲ್ಲಿ ಅವರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com