ಉತ್ತರ ಪ್ರದೇಶ: ಲಿಂಗ ಬದಲಿಸುವ ನೆಪದಲ್ಲಿ 30 ವರ್ಷದ ಮಹಿಳೆಯ ಹತ್ಯೆ ಮಾಡಿದ ಮಾಂತ್ರಿಕ 

ಲಿಂಗ ಬದಲಿಸುವುದರಿಂದ ಆಕೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಮುಂದುವರಿಸಬಹುದು ಎನ್ನುವ ನೆಪವೊಡ್ಡಿ ಮಾಂತ್ರಿಕನೊಬ್ಬ 30 ವರ್ಷದ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಶಹಜಾನ್‌ಪುರ: ಲಿಂಗ ಬದಲಿಸುವುದರಿಂದ ಆಕೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಮುಂದುವರಿಸಬಹುದು ಎನ್ನುವ ನೆಪವೊಡ್ಡಿ ಮಾಂತ್ರಿಕನೊಬ್ಬ 30 ವರ್ಷದ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆರ್‌ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪ್ರಿಯಾ (30) ಎಂಬುವವರು ಪುವಾಯನ್ ನಿವಾಸಿ ಪ್ರೀತಿ (24) ಅವರೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ ಇಬ್ಬರೂ ಸಲಿಂಗ ಸಂಬಂಧ ಹೊಂದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಪಿಟಿಐಗೆ ತಿಳಿಸಿದ್ದಾರೆ.

ಪ್ರಿಯಾ ಜೊತೆಗಿನ ಸಂಬಂಧ ಬೆಳಕಿಗೆ ಬಂದ ನಂತರ ಪ್ರೀತಿಗೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳಾ ಅವರು ಮೊಹಮ್ಮದಿ ಪ್ರದೇಶದ ನಿವಾಸಿ ರಾಮನಿವಾಸ್ ಎಂಬ ತಂತ್ರಿ (ಮಾಂತ್ರಿಕ) ನನ್ನು ಭೇಟಿಯಾಗಿ ಪ್ರಿಯಾಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಎಸ್ಪಿ ಹೇಳಿದ್ದಾರೆ.

ಪ್ರಿಯಾ ಪುರುಷನಾಗಲು ಬಯಸಿದ್ದಾಳೆ ಎಂದು ಪ್ರೀತಿ ಮಾಂತ್ರಿಕನಿಗೆ ತಿಳಿಸಿದ್ದಾಳೆ. ಇದರ ಲಾಭ ಪಡೆದ ಪ್ರೀತಿಯ ತಾಯಿ, ಪ್ರಿಯಾಳನ್ನು ಕೊಲ್ಲಲು 1.5 ಲಕ್ಷ ರೂಪಾಯಿ ನೀಡುವುದಾಗಿ ತಂತ್ರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ.

ಯೋಜನೆಯ ಪ್ರಕಾರ, ಪ್ರೀತಿ ಪ್ರಿಯಾಗೆ ಕರೆ ಮಾಡಿದ್ದಾಳೆ ಮತ್ತು ಮಾಂತ್ರಿಕ ಲಿಂಗವನ್ನು ಬದಲಾಯಿಸುತ್ತಾನೆ ಎಂದು ನಂಬಿಸಿದ್ದಾಳೆ. ಪ್ರಿಯಾ ಏಪ್ರಿಲ್ 13 ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ಆಕೆಯ ಕುಟುಂಬದವರು ಏಪ್ರಿಲ್ 18 ರಂದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರೀತಿ ಮತ್ತು ರಾಮನಿವಾಸ್ ಜೊತೆ ಪ್ರಿಯಾ ಮಾತನಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಮಾಹಿತಿ ಆಧರಿಸಿದ ಪೊಲೀಸರು ರಾಮನಿವಾಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.

‘ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪ್ರಿಯಾಳನ್ನು ಕಾಡಿಗೆ ಕರೆದೊಯ್ದು, ನದಿಯ ದಡದಲ್ಲಿ ಕಣ್ಣು ಮುಚ್ಚಿ ಮಲಗುವಂತೆ ಹೇಳಿದ್ದ. ಇದೇ ವೇಳೆ ಆಕೆಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾಗಿ’ ಆತ ಪೊಲೀಸರಿಗೆ ತಿಳಿಸಿದ್ದಾನೆ.

ಆರೋಪಿ ತಂತ್ರಿ ಮತ್ತು ಪ್ರಿಯಾಳ ಸ್ನೇಹಿತೆ ಪ್ರೀತಿಯನ್ನು ಮಂಗಳವಾರ ಬಂಧಿಸಲಾಗಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಆನಂದ್ ತಿಳಿಸಿದ್ದಾರೆ.

ಹತ್ಯೆಗೆ ಬಳಸಿದ್ದ ಆಯುಧವನ್ನು ತಂತ್ರಿಯ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com