ವರುಣನ ಅವಾಂತರ: ಥಾಣೆಯಲ್ಲಿ ಭಾರಿ ಮಳೆಗೆ ರೆಸ್ಟೋರೆಂಟ್ ಛಾವಣಿ ಕುಸಿತ; ಮೂವರಿಗೆ ಗಾಯ

ಭಾರಿ ಮಳೆಯ ನಂತರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ರೆಸ್ಟೋರೆಂಟ್‌ನ ಛಾವಣಿ ಕುಸಿದು ಮೂವರು ಗಾಯಗೊಂಡಿದ್ದಾರೆ ಎಂದು ನಾಗರಿಕ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಗೀತಾಂಜಲಿ ಕಟ್ಟಡದೊಳಗೆ ಮರವೊಂದು ಉರುಳಿದ ನಂತರ ಹಾನಿಗೊಳಗಾದ ವಾಹನಗಳ ಪರಿಶೀಲಿಸುತ್ತಿರುವ ಜನರು.
ಗೀತಾಂಜಲಿ ಕಟ್ಟಡದೊಳಗೆ ಮರವೊಂದು ಉರುಳಿದ ನಂತರ ಹಾನಿಗೊಳಗಾದ ವಾಹನಗಳ ಪರಿಶೀಲಿಸುತ್ತಿರುವ ಜನರು.

ಥಾಣೆ: ಭಾರಿ ಮಳೆಯ ನಂತರ ಮಹಾರಾಷ್ಟ್ರದ ಥಾಣೆ ನಗರದಲ್ಲಿ ರೆಸ್ಟೋರೆಂಟ್‌ನ ಛಾವಣಿ ಕುಸಿದು ಮೂವರು ಗಾಯಗೊಂಡಿದ್ದಾರೆ ಎಂದು ನಾಗರಿಕ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಘೋಡ್‌ಬಂದರ್ ರಸ್ತೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ವಿಪತ್ತು ನಿಯಂತ್ರಣ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.

ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 12 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 58.90 ಮಿ.ಮೀ ಮಳೆಯಾಗಿದೆ. ನಗರದಲ್ಲಿ ಈ ವರ್ಷ ಒಟ್ಟು 139.76 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 172.71 ಮಿ.ಮೀ ಮಳೆಯಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಉಲ್ಲಾಸ್‌ನಗರ ಟೌನ್‌ಶಿಪ್‌ನ ಹಲವು ಪ್ರದೇಶಗಳು ಸಹ ಹಾನಿಗೊಳಗಾಗಿವೆ ಎಂದು ಥಾಣೆ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಥಾಣೆ ಮತ್ತು ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ ಎಂದು ಅಧಿಕಾರಿಗಳು ಈ ಮೊದಲು ತಿಳಿಸಿದ್ದರು.

ಥಾಣೆ ಜಿಲ್ಲೆಯ ಭಿವಂಡಿ, ಕಲ್ಯಾಣ್ ಮತ್ತು ಬದ್ಲಾಪುರ್‌ನಲ್ಲಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಶನಿವಾರ ಸಂಜೆ ಜನರು ಮೊಣಕಾಲು ಉದ್ದದ ನೀರಿನ ಮೂಲಕ ತೆರಳಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com