ಲಂಡನ್'ನಲ್ಲಿ ರಾಹುಲ್ ಗಾಂಧಿ ಹೇಳಿಕೆ: ಸಂಸತ್ತಿನಲ್ಲಿ ಕೋಲಾಹಲ, ಮತ್ತೆ ಕಲಾಪ ಮುಂದೂಡಿಕೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರವಾಸದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ನೀಡಿದ್ದ ಹೇಳಿಕೆಯು ಸಂಸತ್ತಿನಲ್ಲಿ ಮಂಗಳವಾರವೂ ಕೋಲಾಹಲ ಎಬ್ಬಿಸಿದ್ದು, ಇದರ ಪರಿಣಾಮ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಯಿತು.
ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸಂಸದರು ಲೋಕಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸಂಸದರು ಲೋಕಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರವಾಸದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ನೀಡಿದ್ದ ಹೇಳಿಕೆಯು ಸಂಸತ್ತಿನಲ್ಲಿ ಮಂಗಳವಾರವೂ ಕೋಲಾಹಲ ಎಬ್ಬಿಸಿದ್ದು, ಇದರ ಪರಿಣಾಮ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಸದಸ್ಯರ ನಡುವೆ ಇದೇ ವಿಷಯವಾಗಿ ಗದ್ದಲವಾಗಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಓಂ ಬಿರ್ಲಾ ಅವರು ಪ್ರಶ್ನೋತ್ತರ ಅವಧಿಗೆ ಅವಕಾಶ ಕಲ್ಪಿಸುತ್ತದ್ದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಈ ನಡುವೆ ಬಿಜೆಪಿ ಸದಸ್ಯರು ರಾಹುಲ್‌ ಗಾಂಧಿ ಕ್ಷಮೆಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದವು. ಇದರಿಂದ ಉಭಯ ಪಕ್ಷಗಳ ನಡುವೆ ವಾಕ್ಸಮರ ನಡೆದಿದ್ದರಿಂದ ಸದನವನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಯಿತು.

ಬಜೆಟ್‌ ಅಧಿವೇಶನದ ಎರಡನೇ ಹಂತದ ಚರ್ಚೆ ಸೋಮವಾರ ಆರಂಭವಾಯಿತು. ರಾಹುಲ್‌ ಅವರ ಇತ್ತೀಚಿನ ಲಂಡನ್‌ ಭಾಷಣವು ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದರಿಂದ ಬಿಜೆಪಿ ಸದಸ್ಯರು ರಾಹುಲ್‌ ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಇದರಿಂದ ಕಾಂಗ್ರೆಸ್‌ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಸದನವನ್ನು ಮಂಗಳವಾರ ಮುಂದೂಡಲಾಗಿತ್ತು,

ಇಂದು ಸದನ ಆರಂಭವಾಗುತ್ತಿದ್ದಂತೆ ಇದೇ ವಿಷಯವಾಗಿ ಉಭಯ ಪಕ್ಷಗಳು ಗದ್ದಲ ಮಾಡಿದ್ದರಿಂದ ಸದನವನ್ನು ಮತ್ತೆ ಮುಂದೂಡಲಾಯಿತು.

ದೇಶದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಅವಹೇಳನ ಮಾಡಿರುವ ರಾಹುಲ್‌ ಗಾಂಧಿ ದೇಶದ ಕ್ಷಮೆಯಾಚಿಸಬೇಕೆಂದು ಆಡಳಿತಾರೂಢ ಪಕ್ಷದ ನಾಯಕರು ಪಟ್ಟುಹಿಡಿದರೆ, ವಿದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಈ ಹಿಂದೆ ನೀದಿದ್ದ ಹೇಳಿಕೆಯನ್ನು ಹಿಡಿದು ಸಮರ್ಥಿಸಿಕೊಂಡು, ಸರ್ಕಾರದ ವಿರುದ್ಧ ಪ್ರತಿದಾಳಿ ನಡೆಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com