ದೆಹಲಿ ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ವಿಚಾರಣೆಗೆ ಕೆ.ಕವಿತಾ ಗೈರು ಸಾಧ್ಯತೆ
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಗೆ ಹಾಜರಾಗಬೇಕಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ವಿಚಾರಣೆಗೆ ಗೈರು ಹಾಜರಾಗುವ ಸಾಧ್ಯತೆಯಿದೆ.
Published: 16th March 2023 12:59 PM | Last Updated: 16th March 2023 03:42 PM | A+A A-

ಕೆ ಕವಿತಾ
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಗೆ ಹಾಜರಾಗಬೇಕಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ವಿಚಾರಣೆಗೆ ಗೈರು ಹಾಜರಾಗುವ ಸಾಧ್ಯತೆಯಿದೆ.
ತನ್ನ ಸಮಸ್ಯೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಸಮಯಾವಕಾಶ ಬೇಕು ಎಂದು ಬುಧವಾರ ಇಡಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲ ಬಾರಿ ವಿಚಾರಣೆಗೆ ಹಾಜರಾಗಿದ್ದಾಗ, ಅವರು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ಪಿಳ್ಳೈ ಅವರೊಂದಿಗೆ ವಿಚಾರಣೆಯನ್ನು ಎದುರಿಸಿದರು ಎಂದು ವರದಿಯಾಗಿದೆ.
ಅರುಣ್ ಪಿಳ್ಳೈ ಅವರು ರಾಬಿನ್ ಡಿಸ್ಟಿಲರೀಸ್ ಎಲ್ಎಲ್‌ಪಿ ಹೆಸರಿನ ಕಂಪನಿಯ ಪಾಲುದಾರರಾಗಿದ್ದು, ಕೆ.ಕವಿತಾ ಹಾಗೂ ಇತರರನ್ನು ಒಳಗೊಂಡ ‘ದಕ್ಷಿಣದ ಗುಂಪನ್ನು’ ಪ್ರತಿನಿಧಿಸುತ್ತಿದ್ದರು. ಪಿಳ್ಳೈ ಮತ್ತೊಬ್ಬ ಆರೋಪಿ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರಿಂದ ಲಂಚವನ್ನು ಸಂಗ್ರಹಿಸಿ ಇತರ ಆರೋಪಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಮುಂದೆ ಹಾಜರಾಗಲಿರುವ ಕೆ ಕವಿತಾ
ಪಿಳ್ಳೈ ಅವರು ಕವಿತಾ ಅವರ ಸಹವರ್ತಿ ಎಂದು ಹೇಳಿದ್ದಾರೆ.
ಬುಧವಾರ, ಇ.ಡಿ ಬಿಆರ್‌ಎಸ್ ಎಂಎಲ್‌ಸಿಯ ಮಾಜಿ ಆಡಿಟರ್ ಮತ್ತು ಸೌತ್ ಗ್ರೂಪ್‌ನ ಸದಸ್ಯ ಬುಚ್ಚಿ ಬಾಬು ಅವರ ಹೇಳಿಕೆಯನ್ನು ದಾಖಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿಯಿಂದ ಬಂಧಿಸಲ್ಪಟ್ಟಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತಾನು ಎಂದಿಗೂ ಭೇಟಿ ಮಾಡಿಲ್ಲ ಎಂದು ಕವಿತಾ ಸಮರ್ಥಿಸಿಕೊಂಡಿದ್ದಾರೆ. ಈ ವಿಷಯಕ್ಕೆ ತನ್ನ ಹೆಸರನ್ನು ಅನಗತ್ಯವಾಗಿ ಎಳೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಇ.ಡಿ ಪ್ರಕಾರ, ಅಬಕಾರಿ ನೀತಿ ಪ್ರಕರಣದಲ್ಲಿ ಸೌತ್ ಗ್ರೂಪ್‌ನ ಪ್ರತಿನಿಧಿಗಳಲ್ಲಿ ಕವಿತಾ ಕೂಡ ಒಬ್ಬರು.