ರಾಹುಲ್ ಗಾಂಧಿ ಲಂಡನ್ ಭಾಷಣ ಅನುಮೋದಿಸಿದ ಗೋವಾ ಕಾಂಗ್ರೆಸ್ ಸಂಸದೀಯ ವ್ಯವಹಾರಗಳ ಸಮಿತಿ
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಸದೀಯ ವ್ಯವಹಾರಗಳ ಸಮಿತಿಯು ಯುಕೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಗಳನ್ನು ಶನಿವಾರ ಅನುಮೋದಿಸಿದೆ. ಸಮಿತಿಯ ಸದಸ್ಯರು ರಾಹುಲ್ ಗಾಂಧಿಯನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು.
Published: 18th March 2023 05:12 PM | Last Updated: 18th March 2023 05:12 PM | A+A A-

ರಾಹುಲ್ ಗಾಂಧಿ
ಪಣಜಿ: ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಸದೀಯ ವ್ಯವಹಾರಗಳ ಸಮಿತಿಯು ಯುಕೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಗಳನ್ನು ಶನಿವಾರ ಅನುಮೋದಿಸಿದೆ. ಸಮಿತಿಯ ಸದಸ್ಯರು ರಾಹುಲ್ ಗಾಂಧಿಯನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಗೋವಾ ಡೆಸ್ಕ್ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಸುದ್ದಿಗಾರರೊಂದಿಗೆ ಮಾತನಾಡಿ, ಜಿಪಿಸಿಸಿ ಸಂಸದೀಯ ವ್ಯವಹಾರಗಳ ಸಮಿತಿಯು ರಾಹುಲ್ ಗಾಂಧಿಯವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಅನುಮೋದಿಸಿದೆ. ಈ ನಿರ್ಣಯವನ್ನು ಮಾಜಿ ಕೇಂದ್ರ ವಿದೇಶಾಂಗ ಸಚಿವ ಎಡ್ವರ್ಡೊ ಫಲೈರೊ ಅವರು ಮಂಡಿಸಿದ್ದಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ತಪ್ಪು ಹೇಳಿಲ್ಲ. ಅವರ ಹೇಳಿಕೆಯನ್ನು ಬಿಜೆಪಿ ಮತ್ತು ಬಿಜೆಪಿಗೆ ಹತ್ತಿರವಿರುವ ಮಾಧ್ಯಮಗಳು ತಿರುಚಿದವು ಎಂದು ಅವರು, ಸಂಸತ್ತಿನ ಸದ್ಯದ ಪರಿಸ್ಥಿತಿ ಕುರಿತು ಮಾತನಾಡಿದ ಟ್ಯಾಗೋರ್, ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತ ಪಕ್ಷವು ಕಲಾಪವನ್ನು ಬಲವಂತವಾಗಿ ಮುಂದೂಡುವಲ್ಲಿ ತೊಡಗಿದೆ ಎಂದು ಹೇಳಿದರು.
ಸಚಿವರಿಗೆ ಮಾತ್ರ ಮಾತನಾಡಲು ಅವಕಾಶವಿತ್ತು. ಎಲ್ಲ ವಿರೋಧ ಪಕ್ಷಗಳನ್ನು ಮಾತನಾಡದಂತೆ ತಡೆದರು. ಪ್ರತಿಪಕ್ಷದ ಯಾವ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಿಲ್ಲ, ರಾಹುಲ್ ಗಾಂಧಿ ಮಾತನಾಡಲು ಬಯಸಿದ್ದರು. ಆದರೆ, ಅವರಿಗೂ ಅವಕಾಶ ನೀಡಲಿಲ್ಲ ಎಂದು ದೂರಿದರು.
ಶುಕ್ರವಾರ, ಲೋಕಸಭೆಯ ದೂರದರ್ಶನವನ್ನು ಮ್ಯೂಟ್ ಮಾಡಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಲೋಕಸಭೆಯಿಂದ ಯಾವುದೇ ಧ್ವನಿ ಪ್ರಸಾರವಾಗಲಿಲ್ಲ. ಇದು ಪ್ರಜಾಸತ್ತಾತ್ಮಕ ಕಲಾಪಗಳಿಗೆ ಕರಾಳ ದಿನವಾಗಿದ್ದು, ಸಂಸತ್ತಿನ ಕಲಾಪಗಳ ಮೇಲಿನ ಈ ದಾಳಿಯು ಮೋದಿ ಸರ್ಕಾರಕ್ಕೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಂಬಿಕೆಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಅದಾನಿ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ಹೋರಾಟ ನಡೆಸುತ್ತಿವೆ ಎಂದು ಅವರು ಹೇಳಿದರು.
ಯುಕೆಯಲ್ಲಿ ತಮ್ಮ ಸಂವಾದದ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಭಾರತೀಯ ಪ್ರಜಾಪ್ರಭುತ್ವದ ರಚನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಮತ್ತು ದೇಶದ ಸಂಸ್ಥೆಗಳ ಮೇಲೆ 'ಪೂರ್ಣ ಪ್ರಮಾಣದ ಆಕ್ರಮಣ' ನಡೆಯುತ್ತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದಾಗ ಮೈಕ್‌ಗಳನ್ನು ಆಗಾಗ್ಗೆ "ಆಫ್" ಮಾಡಲಾಗುತ್ತದೆ ಎಂದು ಲಂಡನ್‌ನಲ್ಲಿರುವ ಬ್ರಿಟಿಷ್ ಸಂಸದರಿಗೆ ತಿಳಿಸಿದರು.
ಇದನ್ನೂ ಓದಿ: ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಪ್ರಜಾಪ್ರಭುತ್ವವಲ್ಲ; ರಾಹುಲ್ ಗಾಂಧಿ ವಿರುದ್ಧ ಜೆಪಿ ನಡ್ಡಾ ಕಿಡಿ
ರಾಹುಲ್ ಗಾಂಧಿಯವರ ಹೇಳಿಕೆಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಅವರು ವಿದೇಶಿ ನೆಲದಲ್ಲಿ ಭಾರತವನ್ನು ಕೆಣಕುತ್ತಿದ್ದಾರೆ ಮತ್ತು ವಿದೇಶಿ ಹಸ್ತಕ್ಷೇಪಗಳನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಆಂತರಿಕ ರಾಜಕೀಯವನ್ನು ಎತ್ತುವ ಉದಾಹರಣೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿತು.