ಚೆನ್ನೈ: ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಚಿನ್ನಾಭರಣ ಕಳವು, ದೂರು ದಾಖಲು
ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಲಾಕರ್ ನಿಂದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published: 20th March 2023 12:36 PM | Last Updated: 20th March 2023 06:58 PM | A+A A-

ಐಶ್ವರ್ಯ ರಜನಿಕಾಂತ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಲಾಕರ್ ನಿಂದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2019 ರಲ್ಲಿ ಸಹೋದರಿ ಸೌಂದರ್ಯ ಅವರ ಮದುವೆಗೆಂದು ಬಳಸಿದ್ದ ಸುಮಾರು 3.60 ಲಕ್ಷ ರೂ. ಮೌಲ್ಯದ 60 ಪವನ್ ಚಿನ್ನಾಭರಣ ಕಳ್ಳತನವಾಗಿದೆ. ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳತನ ಮಾಡಿರಬಹುದು ಎಂದು ಐಶ್ವರ್ಯಾ ರಜನಿಕಾಂತ್ ನೀಡಿರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ದೂರಿನ ಮೇರೆಗೆ ತೇನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ನಮೂದಿಸಿರುವ ಕದ್ದ ಚಿನ್ನಾಭರಣಗಳ ಅಂದಾಜು ಮೌಲ್ಯ 3.6 ಲಕ್ಷ ರೂ.ಗಳಾಗಿದೆ. ಲಾಕರ್ ಐಶ್ವರ್ಯಾ ಅವರ ಬಳಿ ಇದ್ದರೂ ಅದನ್ನು ಹಲವು ಬಾರಿ ಸ್ಥಳಾಂತರಿಸಲಾಗಿದೆ.
ಏಪ್ರಿಲ್ 9, 2022 ರಂದು, ಲಾಕರ್ ನಟ ರಜನಿಕಾಂತ್ ಅವರ ಬೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಗೊಂಡಿತು. ಲಾಕರ್‌ನ ಕೀಲಿಗಳನ್ನು ಸೇಂಟ್ ಮೇರಿಸ್ ರಸ್ತೆಯ ಫ್ಲಾಟ್‌ನಲ್ಲಿರುವ ನನ್ನ ವೈಯಕ್ತಿಕ ಕಬ್ಬಿಣದ ಕಪಾಟಿನಲ್ಲಿ ಇರಿಸಲಾಗಿತ್ತು ಎಂದು ಐಶ್ವರ್ಯ ಹೇಳಿದ್ದಾರೆ.
ನನ್ನ ಸಿಬ್ಬಂದಿಗೆ ಇದು ತಿಳಿದಿದೆ. ನನ್ನ ಅನುಪಸ್ಥಿತಿಯಲ್ಲಿ ಅವರು ಆಗಾಗ್ಗೆ ಅಪಾರ್ಟ್ಮೆಂಟ್‌ಗೆ ಭೇಟಿ ನೀಡುತ್ತಾರೆ ಎಂದು ಐಶ್ವರ್ಯಾ ರಜನಿಕಾಂತ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫೆಬ್ರವರಿ 10 ರಂದು ಲಾಕರ್ ಅನ್ನು ಪರಿಶೀಲಿಸಿದಾಗ, ತನ್ನ ಮದುವೆಯಲ್ಲಿ ಖರೀದಿಸಿದ್ದ ಆಭರಣಗಳು ಕಾಣೆಯಾಗಿವೆ ಎಂದು ಐಶ್ವರ್ಯಾ ಹೇಳಿದರು. ಆಕೆಯ ದೂರಿನ ಆಧಾರದ ಮೇಲೆ ತೇನಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 (ಮನೆಕೆಲಸಗಾರರಿಂದ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.