ದೆಹಲಿ ಅಬಕಾರಿ ನೀತಿ: ತನಿಖೆಗೆ ಸಹಕರಿಸಿದ್ದೇನೆ ಎಂದ ಸಿಸೋಡಿಯಾ, ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ

ಅಬಕಾರಿ ಹಗರಣದ ಪ್ರಕರಣದ ಸಿಬಿಐ ತನಿಖೆಗೆ ಸಹಕರಿಸಿದ್ದೇನೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತಮ್ಮ ವಿರುದ್ಧ ಯಾವುದೇ ದೋಷಾರೋಪಣೆಯನ್ನು ಪತ್ತೆಯಾಗಿಲ್ಲ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಅಬಕಾರಿ ಹಗರಣದ ಪ್ರಕರಣದ ಸಿಬಿಐ ತನಿಖೆಗೆ ಸಹಕರಿಸಿದ್ದೇನೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತಮ್ಮ ವಿರುದ್ಧ ಯಾವುದೇ ದೋಷಾರೋಪಣೆಯನ್ನು ಪತ್ತೆಯಾಗಿಲ್ಲ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಎಎಪಿ ನಾಯಕನ ಜಾಮೀನು ಅರ್ಜಿಯ ಕುರಿತು ಇತರೆ ದಾಖಲೆಗಳನ್ನು ಸಲ್ಲಿಸುವಾಗ ಸಿಸೋಡಿಯಾ ಅವರ ಪರ ವಕೀಲರು, ಅವರ ಕಸ್ಟಡಿ ವಿಚಾರಣೆ ಇನ್ನು ಮುಂದೆ ಅಗತ್ಯವಿಲ್ಲ ಮತ್ತು ಅವರು ಎಲ್ಲಿಗೋ ಹಾರಿ ಹೋಗುವ ಅಪಾಯವಿಲ್ಲ ಎಂದು ಹೇಳಿದರು.

'ನಾನು ಸಾರ್ವಜನಿಕ ಸೇವಕ. ಆದರೆ, ಇತರ ಇಬ್ಬರು ಸಾರ್ವಜನಿಕ ಸೇವಕರನ್ನು ಬಂಧಿಸಿಲ್ಲ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿದೆ'. ಅವರ ವಿರುದ್ಧ ಕಿಕ್‌ಬ್ಯಾಕ್ ಪಡೆದ ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲ ಮತ್ತು ಅಬಕಾರಿ ನೀತಿಯಲ್ಲಿನ ಬದಲಾವಣೆಯು ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಅವರ ಪರ ವಕೀಲರು ವಾದಿಸಿದರು.

ಅಬಕಾರಿ ನೀತಿಯಲ್ಲಿನ ಬದಲಾವಣೆಯ ವಿಷಯವು ದೆಹಲಿ ಎಲ್‌ಜಿ ಮತ್ತು ಹಣಕಾಸು ಕಾರ್ಯದರ್ಶಿ ಇತರರಿಗೆ ಹೋಗಿದೆ. ಆಪಾದಿತ ಎಲ್ಲಾ ಅಪರಾಧ ಪ್ರಕರಣದಲ್ಲಿ ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗುತ್ತವೆ ಮತ್ತು ಯಾವುದೇ ಹೆಚ್ಚಿನ ಸೆರೆವಾಸವನ್ನು ಸಮರ್ಥಿಸುವುದಿಲ್ಲ ಎಂದು ಸಿಸೋಡಿಯಾ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ, ಅವರು 'ಹಿಂದೆಂದೂ ಕಂಡಿಲ್ಲದ' 18 ಸಚಿವಾಲಯಗಳೊಂದಿಗೆ ವ್ಯವಹರಿಸಿದ್ದಾರೆ ಮತ್ತು ಅವರು ವಿಮಾನದಲ್ಲಿ ಹಾರುವ ಅಪಾಯವನ್ನು ಹೊಂದಿರದಿದ್ದರೂ, ಅವರು ಖಂಡಿತವಾಗಿಯೂ ಸಾಕ್ಷ್ಯ ನಾಶದ ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳಿತು.

ಸಿಬಿಐ ಪರ ವಾದ ಮಂಡಿಸಿದ ವಕೀಲರು, ಮಾಜಿ ಉಪಮುಖ್ಯಮಂತ್ರಿಯವರು ಪದೇ ಪದೇ ಫೋನ್ ಬದಲಾಯಿಸುತ್ತಿರುವುದು ಯಾವುದೇ ಮುಗ್ಧ ಕೃತ್ಯವಲ್ಲ. ಆದರೆ, ಉದ್ದೇಶಪೂರ್ವಕವಾಗಿ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಹಾಗೆ ಮಾಡಲಾಗಿದೆ ಎಂದು ಹೇಳಿದರು.

ಪ್ರಕರಣದ ಆರೋಪಪಟ್ಟಿ ಸಲ್ಲಿಸಲು ತನಿಖಾ ಸಂಸ್ಥೆಗೆ 60 ದಿನಗಳ ಕಾಲಾವಕಾಶವಿದ್ದು, ಮನೀಶ್ ಸಿಸೋಡಿಯಾ ಹೊರಬಂದರೆ ತನಿಖೆಯಲ್ಲಿ ಗಂಭೀರವಾಗಿ ರಾಜಿ ಮಾಡಿಕೊಳ್ಳಲಾಗುತ್ತದೆ. ಸಿಸೋಡಿಯಾ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸುವ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ಸೋಮವಾರ, ಸಿಬಿಐ ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ 3 ರವರೆಗೆ ವಿಸ್ತರಿಸಿದೆ.

ಸಂಬಂಧಿತ ಪ್ರಕರಣವೊಂದರಲ್ಲಿ ಅವರು ಸದ್ಯ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿದ್ದಾರೆ.

2021-22ರ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 9 ರಂದು ಇ.ಡಿ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನಲ್ಲಿ ಬಂಧಿಸಿತ್ತು.

ಫೆಬ್ರುವರಿ 26 ರಂದು ಸಿಬಿಐ ಸಿಸೋಡಿಯಾ ಅವರನ್ನು ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com