ವಿಪಕ್ಷಗಳ ಗದ್ದಲದ ನಡುವೆಯೇ ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಹಣಕಾಸು ಮಸೂದೆಗೆ ಅಂಗೀಕಾರ
ಅದಾನಿ ಗ್ರೂಪ್ ಆಫ್ ಕಂಪನಿಗಳ ಮೇಲಿನ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಚರ್ಚೆಯಿಲ್ಲದೆ ಮಹತ್ವದ 'ಹಣಕಾಸು ಮಸೂದೆ 2023' ಅನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿತು.
Published: 24th March 2023 01:56 PM | Last Updated: 24th March 2023 01:59 PM | A+A A-

ಸಂಸತ್ತಿನ ಬಜೆಟ್ ಅಧಿವೇಶನ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಾತನಾಡಿದರು.
ನವದೆಹಲಿ: ಅದಾನಿ ಗ್ರೂಪ್ ಆಫ್ ಕಂಪನಿಗಳ ಮೇಲಿನ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಚರ್ಚೆಯಿಲ್ಲದೆ ಮಹತ್ವದ 'ಹಣಕಾಸು ಮಸೂದೆ 2023' ಅನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿತು.
ಹಲವಾರು ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆಯನ್ನು ಅಂಗೀಕರಿಸಲಾಯಿತು. ಅಲ್ಲದೆ, ಇನ್ನೂ 20 ವಿಭಾಗಗಳನ್ನು ಮಸೂದೆಗೆ ಸೇರಿಸಲಾಗಿದೆ.
ಸದನವು ವಿಧೇಯಕವನ್ನು ಕೈಗೆತ್ತಿಕೊಳ್ಳುತ್ತಿರುವಾಗ, ಹಲವಾರು ವಿರೋಧ ಪಕ್ಷದ ಸದಸ್ಯರು ಜೋರಾಗಿ ಘೋಷಣೆಗಳನ್ನು ಕೂಗಿದರು ಮತ್ತು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಸಮೂಹದ ಕಂಪನಿಗಳ ಮೇಲಿನ ಆರೋಪಗಳನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸುವ ಫಲಕಗಳನ್ನು ಹಿಡಿದಿದ್ದರು.
#WATCH | 'The Finance Bill, 2023 ' tabled by Union Finance Minister Nirmala Sitharaman in Lok Sabha amid sloganeering by Opposition MPs demanding a JPC inquiry into the Adani Group issue. pic.twitter.com/8WjQPuurJf
— ANI (@ANI) March 24, 2023
‘ರಾಹುಲ್ ಗಾಂಧಿಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಿ’ ಮತ್ತು ‘ನಾವು ಬ್ರಿಟಿಷರ ವಿರುದ್ಧ ಹೋರಾಡಿದ್ದೇವೆ, ನಾವು ಮೋದಿ ಮತ್ತು ಆರೆಸ್ಸೆಸ್ ವಿರುದ್ಧವೂ ಹೋರಾಡುತ್ತೇವೆ’ ಎಂಬ ಭಿತ್ತಿಪತ್ರಗಳನ್ನು ವಿಪಕ್ಷದ ಸದಸ್ಯರು ಪ್ರದರ್ಶಿಸಿದರು.
ಅದಾನಿ ಗ್ರೂಪ್ ಸಮಸ್ಯೆಯ ಕುರಿತು ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರ ಘೋಷಣೆಗಳ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 'ಹಣಕಾಸು ಮಸೂದೆ, 2023' ಮಂಡಿಸಿದರು.
ಇದನ್ನೂ ಓದಿ: ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ 45 ಲಕ್ಷ ಕೋಟಿ ರೂ. ಬಜೆಟ್ ಅಂಗೀಕಾರ
ಈಮಧ್ಯೆ, ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಹಣಕಾಸಿನ ವಿವೇಕವನ್ನು ಉಳಿಸಿಕೊಂಡು, ಪಿಂಚಣಿಗಳ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ನೌಕರರ ಅಗತ್ಯಗಳನ್ನು ತಿಳಿಸುವ ವಿಧಾನವನ್ನು ಅಭಿವೃದ್ಧಿಪಡಿಸಲು ಹಣಕಾಸು ಕಾರ್ಯದರ್ಶಿ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಸೀತಾರಾಮನ್ ಮಸೂದೆಯ ಕುರಿತು ಮಾತನಾಡುವಾಗ ಘೋಷಿಸಿದರು.
ಈ ವಿಧಾನವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು.
ಹಣಕಾಸು ಮಸೂದೆ ಅಂಗೀಕಾರವಾದ ಕೂಡಲೇ ಕೆಳಮನೆಯನ್ನು ಮಾರ್ಚ್ 27ಕ್ಕೆ ಮುಂದೂಡಲಾಯಿತು.
ಸದನ ಮುಂದೂಡಿದ ಬಳಿಕ ಪ್ರತಿಪಕ್ಷಗಳ ಸದಸ್ಯರು ತಮ್ಮ ಭಿತ್ತಿಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠಕ್ಕೆ ಎಸೆದ ದೃಶ್ಯ ಕಂಡು ಬಂತು.
'ಹಣಕಾಸು ಮಸೂದೆ 2023' ಕೇಂದ್ರ ಸರ್ಕಾರದ 2023-24ರ ಹಣಕಾಸು ಪ್ರಸ್ತಾವನೆಗಳನ್ನು ಜಾರಿಗೆ ತರುತ್ತದೆ.