ಬೇಲೂರು- ಹಾಸನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 700 ಕೋಟಿ ರೂ. ಅನುಮೋದಿಸಿದ ಕೇಂದ್ರ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕರ್ನಾಟಕದಲ್ಲಿ ಎನ್‌ಎಚ್ 373ರ ಬೇಲೂರಿನಿಂದ ಹಾಸನ ವಿಭಾಗದ ರಸ್ತೆ ಅಗಲೀಕರಣಕ್ಕೆ ಕೇಂದ್ರವು 698.08 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ ಎಂದಿದ್ದಾರೆ.
Published: 26th March 2023 04:19 PM | Last Updated: 26th March 2023 04:19 PM | A+A A-

ನಿತಿನ್ ಗಡ್ಕರಿ
ಬೆಂಗಳೂರು: ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಕ್ಕೆ ಭರಪೂರ ಕೊಡುಗೆಗಳು ಲಭ್ಯವಾಗುತ್ತಿವೆ. ಇದೀಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕರ್ನಾಟಕದಲ್ಲಿ ಎನ್‌ಎಚ್ 373ರ ಬೇಲೂರಿನಿಂದ ಹಾಸನ ವಿಭಾಗದ ರಸ್ತೆ ಅಗಲೀಕರಣಕ್ಕೆ ಕೇಂದ್ರವು 698.08 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ ಎಂದಿದ್ದಾರೆ.
...will be carried out in the Engineering, Procurement, and Construction (EPC) mode.#PragatiKaHighway #GatiShakti @PMOIndia @BSBommai @JoshiPralhad @bhagwantkhuba@ShobhaBJP @iPrajwalRevanna @nalinkateel @BJP4Karnataka
— Nitin Gadkari (@nitin_gadkari) March 26, 2023
ಎನ್ಎಚ್ (ಒ) ವಾರ್ಷಿಕ ಯೋಜನೆ 2022-23 (ಪ್ಯಾಕೇಜ್-II) ಅಡಿಯಲ್ಲಿ ಕಾರ್ಯಗತಗೊಳಿಸಲಾದ ಈ ಯೋಜನೆಯನ್ನು ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಮೋಡ್‌ನಲ್ಲಿ ಕೈಗೊಳ್ಳಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.