ಗಾಂಧಿ ಕುಟುಂಬವು ತನ್ನನ್ನು ತಾನು 'ಗಣ್ಯ' ಮತ್ತು ಸಂವಿಧಾನಕ್ಕಿಂತ ಮೇಲಿದೆ ಎಂದು ಪರಿಗಣಿಸಿದೆ: ಗಜೇಂದ್ರ ಸಿಂಗ್ ಶೇಖಾವತ್

ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದರ ವಿರುದ್ಧ ವಿರೋಧ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, 'ಗಾಂಧಿ ಕುಟುಂಬವು ತಮ್ಮನ್ನು ತಾವು ಗಣ್ಯರು ಮತ್ತು ಸಂವಿಧಾನಕ್ಕಿಂತ ಮೇಲಿರುವುದಾಗಿ' ಪರಿಗಣಿಸಿದೆ ಎಂದು ಸೋಮವಾರ ಆರೋಪಿಸಿದೆ.
ಗಜೇಂದ್ರ ಸಿಂಗ್ ಶೇಖಾವತ್
ಗಜೇಂದ್ರ ಸಿಂಗ್ ಶೇಖಾವತ್

ನವದೆಹಲಿ: ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದರ ವಿರುದ್ಧ ವಿರೋಧ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, 'ಗಾಂಧಿ ಕುಟುಂಬವು ತಮ್ಮನ್ನು ತಾವು ಗಣ್ಯರು ಮತ್ತು ಸಂವಿಧಾನಕ್ಕಿಂತ ಮೇಲಿರುವುದಾಗಿ' ಪರಿಗಣಿಸಿದೆ ಎಂದು ಸೋಮವಾರ ಆರೋಪಿಸಿದೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ವಯನಾಡ್ ಸಂಸದರ ಅನರ್ಹತೆಗೆ ಬಿಜೆಪಿ ಅಥವಾ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದರು.

ಕಾಂಗ್ರೆಸ್ ನಾಯಕರು ನ್ಯಾಯಾಂಗ ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಬಗ್ಗೆ ಗದ್ದಲ ಎಬ್ಬಿಸುತ್ತಿರುವ ರೀತಿ, ಅವರು ಗಾಂಧಿ ಕುಟುಂಬವನ್ನು ಭಾರತದ ನ್ಯಾಯಾಂಗ ಪ್ರಕ್ರಿಯೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿದೆ ಎಂದು ಪರಿಗಣಿಸಿರುವುದಾಗಿ ತೋರಿಸುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೋದಿ ಉಪನಾಮದ ಬಗ್ಗೆ ಕ್ಷಮೆಯಾಚಿಸುವ ಅವಕಾಶ ಸೇರಿದಂತೆ ಹಲವು ಅವಕಾಶಗಳನ್ನು ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಗೆ ನೀಡಿದೆ. ಆದರೆ, ನ್ಯಾಯಾಂಗವು ಅವರ ಕುಟುಂಬ ಸದಸ್ಯರ ವಿರುದ್ಧ ತೀರ್ಪು ನೀಡಲು 'ಧೈರ್ಯ' ಮಾಡುವುದಿಲ್ಲ ಎಂದು ಭಾವಿಸಿ ಅವರು ನಿರಾಕರಿಸಿದರು. ಕಾನೂನು ತನ್ನ ಕೆಲಸ ಮಾಡುತ್ತಿದ್ದು, ಬಿಜೆಪಿಗೂ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿರುವ ಜನರು, ನ್ಯಾಯಾಂಗದ ತೀರ್ಪು ಮತ್ತು ಕಾನೂನು ಕ್ರಮದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರನ್ನು ಲೇವಡಿ ಮಾಡಿದ್ದನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, 'ದೇಶವನ್ನು ಅವಮಾನಿಸಲು ಮತ್ತು ಪ್ರಜಾಪ್ರಭುತ್ವದ ವಿವಿಧ ಸ್ತಂಭಗಳಿಗಿಂತ ತಾನು ಮೇಲಿರುವೆ ಎಂಬುದನ್ನು ತೋರಿಸಲು ಅವರು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ' ಎಂದು ಆರೋಪಿಸಿದರು. 

ಅವರಂತಹವರು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುತ್ತಾರೆ. ಏಕೆಂದರೆ, ಅವರು ತಮ್ಮನ್ನು ತಾವು ಮೇಲಿನವರು ಎಂದು ಪರಿಗಣಿಸುತ್ತಾರೆ. ನ್ಯಾಯಾಲಯ ಅವಕಾಶ ನೀಡಿದರೂ ಕ್ಷಮೆಯಾಚಿಸುವ ಅವಕಾಶವನ್ನು ಸಹ ಬಳಸದೆ ಅಹಂಕಾರದಿಂದ ವರ್ತಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಅವರಂತಹ ಕಾಂಗ್ರೆಸ್ ನಾಯಕರು ತಮ್ಮ ನಡವಳಿಕೆಯಿಂದ ರಾಜ್ಯಸಭಾ ಅಧ್ಯಕ್ಷರನ್ನು ಅವಮಾನಿಸಿದ್ದಾರೆ. ವೀರ್ ಸಾವರ್ಕರ್ ಅವರಂತಹ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಗಾಂಧಿ ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದರು.

'ರಾಹುಲ್ ಗಾಂಧಿ ಅವರು ಸಾವರ್ಕರ್ ಅಲ್ಲ ಎಂದು ಸರಿಯಾಗಿಯೇ ಹೇಳಿದ್ದಾರೆ. ರಾಹುಲ್ ನಿಜವಾಗಿ ಸಾವರ್ಕರ್ ಅವರನ್ನು ತಿಳಿದುಕೊಳ್ಳಲು ಬಯಸಿದರೆ, ಅವರು ಅಂಡಮಾನ್ ಜೈಲಿಗೆ ಹೋಗಬೇಕು ಮತ್ತು ಸಾವರ್ಕರ್ ನಿಜವಾಗಿ ಯಾರು ಮತ್ತು ಅವರು ಮಾಡಿದ ತ್ಯಾಗವನ್ನು ಅರಿತುಕೊಳ್ಳಲು ಸಮಯ ಕಳೆಯಬೇಕು' ಎಂದು ಶೇಖಾವತ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com