ಅಮೃತ್ ಪಾಲ್ ಸಿಂಗ್
ದೇಶ
ಅಮೃತ್ ಪಾಲ್ ತಪ್ಪಿಸಿಕೊಳ್ಳಲು ಬಿಡದಂತೆ ನೇಪಾಳಕ್ಕೆ ಭಾರತದ ಮನವಿ
ಖಲಿಸ್ತಾನಿ ಬೆಂಬಲಿಗ, ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದ್ದು, ಆತ ಅಲ್ಲಿಂದ ಬೇರೆ ರಾಷ್ಟ್ರಕ್ಕೆ ಹೋಗದಂತೆ ತಡೆಯಲು ನೇಪಾಳಕ್ಕೆ ಭಾರತ ಮನವಿ ಮಾಡಿದೆ.
ಕಠ್ಮಂಡು: ಖಲಿಸ್ತಾನಿ ಬೆಂಬಲಿಗ, ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದ್ದು, ಆತ ಅಲ್ಲಿಂದ ಬೇರೆ ರಾಷ್ಟ್ರಕ್ಕೆ ಹೋಗದಂತೆ ತಡೆಯಲು ನೇಪಾಳಕ್ಕೆ ಭಾರತ ಮನವಿ ಮಾಡಿದೆ.
ಭಾರತೀಯ ಪಾಸ್ಪೋರ್ಟ್ ಹಾಗೂ ಇನ್ಯಾವುದೇ ನಕಲಿ ಪಾಸ್ಪೋರ್ಟ್ ಗಳನ್ನು ಬಳಕೆ ಮಾಡಿ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಲು ನೇಪಾಳ ಸರ್ಕಾರಕ್ಕೆ ಭಾರತ ಸರ್ಕಾರ ಮನವಿ ಮಾಡಿದೆ.
ಕಾನ್ಸುಲರ್ ಸೇವೆಗಳ ಇಲಾಖೆಗೆ ಈ ಸಂಬಂಧ ಪತ್ರ ಬರೆಯಲಾಗಿದ್ದು, ಕಠ್ಮಂಡುವಿನಲ್ಲಿರುವ ಭಾರತದ ರಾಯಭಾರ ಕಚೇರಿ, ಸಿಂಗ್ ನೇಪಾಳದಲ್ಲಿ ಅಡಗಿರುವ ಸಾಧ್ಯತೆಯ ಬಗ್ಗೆ ತಿಳಿಸಿದೆ.
ಪತ್ರದಲ್ಲಿ ಸಿಂಗ್ ವಿವರಗಳನ್ನು ನೀಡಲಾಗಿದ್ದು ಸಂಬಂಧಿತ ಸಂಸ್ಥೆಗಳೊಂದಿಗೆ ಅದನ್ನು ಹಂಚಿಕೊಳ್ಳುವುದಕ್ಕೆ ಸೂಚಿಸಲಾಗಿದೆ.
ಅಮೃತ್ ಪಾಲ್ ಸಿಂಗ್ ಹಲವು ಗುರುತುಗಳೊಂದಿಗೆ ಹಲವು ಪಾಸ್ಪೋರ್ಟ್ ಗಳನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಮಾ.18 ರಿಂದ ಅಮೃತ್ ಪಾಲ್ ಸಿಂಗ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.