ಅಧಿಕೃತ ಸರ್ಕಾರಿ ಬಂಗಲೆ ತೆರವು ಮಾಡುವಂತೆ ರಾಹುಲ್‌ಗೆ ಸೂಚನೆ: ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಅವರ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ತರಾಟೆಗೆ ತೆಗೆದುಕೊಂಡರು. ತಮ್ಮ ಪಕ್ಷದ ಮಾಜಿ ಮುಖ್ಯಸ್ಥರಿಗೆ 'ಬೆದರಿಕೆ, ಹೆದರಿಕೆ ಮತ್ತು ಅವಮಾನ' ಮಾಡುವ ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದರು.
Published: 28th March 2023 01:47 PM | Last Updated: 28th March 2023 07:03 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಅವರ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ತರಾಟೆಗೆ ತೆಗೆದುಕೊಂಡರು. ತಮ್ಮ ಪಕ್ಷದ ಮಾಜಿ ಮುಖ್ಯಸ್ಥರಿಗೆ 'ಬೆದರಿಕೆ, ಹೆದರಿಕೆ ಮತ್ತು ಅವಮಾನ' ಮಾಡುವ ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದರು.
ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿಯವರೊಂದಿಗೆ ಅವರ 10 ಜನಪಥ್ ನಿವಾಸಕ್ಕೆ ಹೋಗಿ ವಾಸಿಸಬಹುದು ಅಥವಾ ಗಾಂಧಿ ವಂಶಸ್ಥರಿಗೆ ಸೇರಿದ ಒಂದು ಮನೆಯನ್ನು ಖಾಲಿ ಮಾಡುವ ಮೂಲಕ ಅದರಲ್ಲೇ ವಾಸಿಸಬಹುದು ಎಂದು ಅವರು ಹೇಳಿದರು.
'ಅವರನ್ನು (ರಾಹುಲ್ ಗಾಂಧಿ) ದುರ್ಬಲಗೊಳಿಸಲು ಅವರು (ಕೇಂದ್ರ ಸರ್ಕಾರ) ಎಲ್ಲವನ್ನೂ ಮಾಡುತ್ತಾರೆ. ಅವರು ತಮ್ಮ ತಾಯಿಯೊಂದಿಗೆ ವಾಸಿಸಬಹುದು ಅಥವಾ ನನ್ನ ಮನೆಗೂ ಬರಬಹುದು. ನಾನು ಅವರಿಗೆ ಒಂದು ಮನೆಯನ್ನು ಖಾಲಿ ಮಾಡಿ ನೀಡುತ್ತೇನೆ. ಬೆದರಿಕೆ, ಹೆದರಿಕೆ ಮತ್ತು ಅವಮಾನ ಮಾಡುವ ಸರ್ಕಾರದ ಈ ಧೋರಣೆಯನ್ನು ನಾನು ಖಂಡಿಸುತ್ತೇನೆ' ಎಂದು ಖರ್ಗೆ ಸಂಸತ್ತಿಗೆ ತೆರಳುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ನಾನು ಬಂಗಲೆ ಖಾಲಿ ಮಾಡುತ್ತೇನೆ: ಪತ್ರ ಬರೆದ ರಾಹುಲ್ ಗಾಂಧಿ
'ಪ್ರಜಾಪ್ರಭುತ್ವದಲ್ಲಿ ಹಲವು ಬಾರಿ ಮೂರ್ನಾಲ್ಕು ತಿಂಗಳ ಕಾಲ ಮನೆ ಇಲ್ಲದೇ ಬದುಕಿದ್ದೇವೆ. ಆರು ತಿಂಗಳ ನಂತರ ನನಗೆ ಈ ಬಂಗಲೆ ಸಿಕ್ಕಿತು. ಜನರು ಇತರರನ್ನು ಅವಮಾನಿಸಲು ಈ ಕೆಲಸಗಳನ್ನು ಮಾಡುತ್ತಾರೆ. ಈ ಧೋರಣೆಯನ್ನು ನಾನು ಖಂಡಿಸುತ್ತೇನೆ' ಎಂದರು.
ಕಳೆದ ವಾರ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆಯ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಯಿತು. ಅದಾದ ನಂತರ, ಏಪ್ರಿಲ್ 22 ರೊಳಗೆ ಅವರಿಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೋಮವಾರ ಸೂಚಿಸಲಾಯಿತು.
ಲೋಕಸಭೆಯ ವಸತಿ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿತು ಮತ್ತು ಸದನದ ಕಾರ್ಯದರ್ಶಿಯ ನಿರ್ದೇಶನದ ಮೇರೆಗೆ 2005 ರಿಂದ 12, ತುಘಲಕ್ ಲೇನ್ ಬಂಗಲೆಯಲ್ಲಿ ವಾಸಿಸುತ್ತಿರುವ ಝಡ್ ಪ್ಲಸ್ ಭದ್ರತೆಯ ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದೆ.