ಸರ್ಕಾರಿ ಬಂಗಲೆ ತೆರವಿಗೆ ಸೂಚನೆ: ದಿಗ್ವಿಜಯ್ ಸಿಂಗ್ ಬೆನ್ನಲ್ಲೇ ರಾಹುಲ್ ಗಾಂಧಿಗೆ ಮನೆ ಆಫರ್ ಮಾಡಿದ ನಿವೃತ್ತ ಸರ್ಕಾರಿ ನೌಕರ!

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೀಡಾಗಿ ಅನರ್ಹತೆಗೀಡಾದ ಬೆನ್ನಲ್ಲೇ ಸರ್ಕಾರ ಬಂಗಲೆ ತೆರವಿಗೆ ಸೂಚನೆ ಪಡೆದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಂದು ಮನೆ ಆಫರ್ ಬಂದಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೀಡಾಗಿ ಅನರ್ಹತೆಗೀಡಾದ ಬೆನ್ನಲ್ಲೇ ಸರ್ಕಾರ ಬಂಗಲೆ ತೆರವಿಗೆ ಸೂಚನೆ ಪಡೆದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಂದು ಮನೆ ಆಫರ್ ಬಂದಿದೆ.

ಹೌದು.. ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್ ರಾಹುಲ್ ಗಾಂಧಿಗೆ ತಮ್ಮ ಬಂಗಲೆಯಲ್ಲಿ ಉಳಿಯಲು ಅವಕಾಶ ನೀಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿಗೆ ಮತ್ತೊಂದು ಮನೆ ಆಫರ್ ಬಂದಿದೆ.

ಈ ಬಾರಿ ನಿವೃತ್ತ ನಾಗರಿಕ ಸೇವಾ ಸಿಬ್ಬಂದಿ ಎನ್‌ಎನ್ ಓಜಾ ಅವರು ರಾಹುಲ್ ಗಾಂಧಿಗೆ ತಮ್ಮ ಮನೆಯ ನೀಡುವುದಾಗಿ ಆಫರ್ ನೀಡಿದ್ದಾರೆ. ಡಾರ್ಜಲಿಂಗ್ ನಲ್ಲಿರುವ ತಮ್ಮ ಮಿರಿಕ್ ಕಾಟೇಜ್ ನಲ್ಲಿ ರಾಹುಲ್ ಗಾಂಧಿ ಅವರು ತಂಗಬಹುದು ಎಂದು ಹೇಳಿದ್ದಾರೆ. 

'ದೆಹಲಿ 12 ತುಘಲಕ್ ಲೇನ್ ನಲ್ಲಿರುವ ಮನೆಯನ್ನು ರಾಹುಲ್ ಗಾಂಧಿ ಅವರು ಖಾಲಿ ಮಾಡಬೇಕಾದರೆ ಅವರಿಗೆ ಲಕ್ಷಾಂತರ ಆಫರ್ ಗಳು ಬಂದಿವೆ. ನಾನೂ ಕೂಡ ಈ ಪಟ್ಟಿಗೆ ಒಂದು ಸೇರಿಸಲು ಇಚ್ಚಿಸುತ್ತೇನೆ. ಪ್ರಶಾಂತ ಡಾರ್ಜಿಲಿಂಗ್ ಬೆಟ್ಟಗಳಲ್ಲಿನ ನನ್ನ ಮಿರಿಕ್ ಕಾಟೇಜ್ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಪ್ರಕೃತಿ ಸೌದರ್ಯದ ಮಧ್ಯದಲ್ಲಿ ಇದೆ. ನೀವು ನೀವು ಬಯಸಿದಷ್ಟು ಕಾಲ ಇಲ್ಲಿ ಉಳಿಯ ಬಹುದು. ನಿಮ್ಮನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಲೋಕಸಭೆಯಿಂದ ಅನರ್ಹಗೊಂಡ ನಂತರ ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿರುವ ರಾಹುಲ್ ಗಾಂಧಿ ಅವರು ನನ್ನ ಮನೆಯಲ್ಲಿಯೇ ಇರಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಬುಧವಾರ ಹೇಳಿದ್ದರು. ರಾಹುಲ್ ಗಾಂಧಿ ಉದಾರ ಹೃದಯದ ವ್ಯಕ್ತಿಯಾಗಿದ್ದು, ಅವರಿಗೆ ಇಡೀ ದೇಶವೇ ಒಂದು ಕುಟುಂಬವಿದ್ದಂತೆ ಎಂದು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ದಿಗ್ವಿಜಯ್ ಸಿಂಗ್, 'ರಾಹುಲ್ ಜೀ ನನ್ನ ಮನೆ ನಿಮ್ಮ ಮನೆ ಮತ್ತು ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ನೀನು ಇಲ್ಲಿಗೆ ಬಂದು ನೆಲೆಸಿದರೆ ನಾನೇ ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ ಎಂದು ಹೇಳಿದ್ದರು.

ಇದೇ ಸೋಮವಾರ ರಾಹುಲ್ ಗಾಂಧಿ ಅವರಿಗೆ ಏಪ್ರಿಲ್ 22 ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಬೇಕು ಎಂದು ನೋಟಿಸ್ ನೀಡಲಾಗಿತ್ತು. ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಇನ್ನು ವಯನಾಡ್ ಸಂಸದರಲ್ಲ. ರಾಹುಲ್ ಅವರ ಅಧಿಕೃತ ನಿವಾಸಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಸತಿ ಸಮಿತಿ ಈ ನಿರ್ಧಾರ ಕೈಗೊಂಡಿದ್ದು, ನಂತರ ನಿವಾಸವನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಲಾಗಿದೆ. ರಾಹುಲ್ ಗಾಂಧಿ 2005 ರಿಂದ 12, ತುಘಲಕ್ ಲೇನ್‌ನಲ್ಲಿ ವಾಸಿಸುತ್ತಿದ್ದರು. ಈ ನೋಟಿಸ್ ಗೆ ಉತ್ತರಿಸಿರುವ ರಾಹುಲ್ ಗಾಂಧಿ ಕೂಡ ನಿವಾಸ ಖಾಲಿ ಮಾಡುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com