ಮಮತಾ ವಿರುದ್ಧದ ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ಅನರ್ಹತೆ ಕ್ರಮ ಜರುಗಿಸಲು ಟಿಎಂಸಿ ಪಟ್ಟು
ಮಮತಾ ಬ್ಯಾನರ್ಜಿ ವಿರುದ್ಧ ವ್ಯಂಗ್ಯ, ಟೀಕೆ ಮಾಡುವ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಆರೋಪದಡಿ ಪ್ರಧಾನಿ ಮೋದಿ ವಿರುದ್ಧ ಅನರ್ಹತೆ ಕ್ರಮ ಜರುಗಿಸಬೇಕೆಂದು ತೃಣಮೂಲ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
Published: 29th March 2023 06:05 PM | Last Updated: 29th March 2023 08:14 PM | A+A A-

ಪ್ರಧಾನಿ ಮೋದಿ
ನವದೆಹಲಿ: ಮಮತಾ ಬ್ಯಾನರ್ಜಿ ವಿರುದ್ಧ ವ್ಯಂಗ್ಯ, ಟೀಕೆ ಮಾಡುವ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಆರೋಪದಡಿ ಪ್ರಧಾನಿ ಮೋದಿ ವಿರುದ್ಧ ಅನರ್ಹತೆ ಕ್ರಮ ಜರುಗಿಸಬೇಕೆಂದು ತೃಣಮೂಲ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ರಾಹುಲ್ ಗಾಂಧಿ ಅವರನ್ನು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಾಗುವುದಾದರೆ ಪ್ರಧಾನಿ ಮೋದಿ ವಿರುದ್ಧ ಏಕೆ ಸಾಧ್ಯವಾಗುವುದಿಲ್ಲ? ಎಂದು ಟಿಎಂಸಿಯ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಗೀತೆಗೆ ಅಗೌರವ: ದೂರು ರದ್ದುಗೊಳಿಸುವಂತೆ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ಬಾಂಬೆ ಹೈಕೋರ್ಟ್ ನಲ್ಲಿ ವಜಾ
ಬುಡಕಟ್ಟು ಜನಾಂಗದ ಹಿನ್ನೆಲೆ ಹೊಂದಿರುವ ಮಹಿಳಾ ಸಚಿವರಿಗೆ ಅವಮಾನ ಮಾಡಿದ ಸುವೇಂದು ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪಕ್ಷದ ಕಾನೂನು ವಿಭಾಗಕ್ಕೆ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ನಡೆದ ಸಮಾವೇಶದಲ್ಲಿ ಕರೆ ನೀಡಿದ್ದಾರೆ.