ಬಿಸಿಸಿಐ ಹೋಟೆಲ್ ರೂಂನಲ್ಲಿ ವೇಶ್ಯೆಯರ ಜೊತೆ ಮೊಹಮ್ಮದ್ ಶಮಿ ಲೈಂಗಿಕ ಕ್ರಿಯೆ: ಪತ್ನಿ ಆರೋಪ

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕ್ರಿಕೆಟಿಗನ ಬಂಧನಕ್ಕೆ ತಡೆಯಾಜ್ಞೆ ನೀಡಿದ ಕೊಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಇದೇ ವೇಳೆ ಜಹಾನ್ ಅವರು ಹೊಸ ಆರೋಪಗಳನ್ನು ಶಮಿ ವಿರುದ್ಧ ಮಾಡಿದ್ದಾರೆ.
ಹಸಿನ್ ಜಹಾನ್ - ಮೊಹಮ್ಮದ್ ಶಮಿ
ಹಸಿನ್ ಜಹಾನ್ - ಮೊಹಮ್ಮದ್ ಶಮಿ
Updated on

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕ್ರಿಕೆಟಿಗನ ಬಂಧನಕ್ಕೆ ತಡೆಯಾಜ್ಞೆ ನೀಡಿದ ಕೊಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಇದೇ ವೇಳೆ ಜಹಾನ್ ಅವರು ಹೊಸ ಆರೋಪಗಳನ್ನು ಶಮಿ ವಿರುದ್ಧ ಮಾಡಿದ್ದಾರೆ.

ಮೊಹಮ್ಮದ್ ಶಮಿ ಅವರು ತಮ್ಮ ಮದುವೆಯುದ್ದಕ್ಕೂ ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು ಮತ್ತು ವೇಶ್ಯೆಯರ ಜೊತೆ ಲೈಂಗಿಕ ಸಂಬಂಧವನ್ನು ಹೊಂದಿದ್ದರು. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಹಿಂದೆಯೂ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಹಸಿನ್ ಆರೋಪಿಸಿದ್ದಾರೆ. 

ಅಷ್ಟೇ ಅಲ್ಲದೆ, ಕ್ರಿಕೆಟಿಗನ ವಿರುದ್ಧ ಆಘಾತಕಾರಿ ಆರೋಪಗಳನ್ನೂ ಮಾಡಿರುವ ಹಸಿನ್, ಶಮಿ ಅವರು 'ಅಕ್ರಮ ವಿವಾಹೇತರ ಸಂಬಂಧಗಳನ್ನು' ಹೊಂದಿದ್ದಾರೆ. ಅಲ್ಲದೆ, ಬಿಸಿಸಿಐನ ಕ್ರಿಕೆಟ್ ಪ್ರವಾಸಗಳಲ್ಲಿದ್ದಾಗ ಬಿಸಿಸಿಐ ಬುಕ್ ಮಾಡಿದ ಹೋಟೆಲ್ ಕೊಠಡಿಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು' ಎಂದು ದೂರಿದ್ದಾರೆ.

ಈಗಲೂ ಹೋಟೆಲ್ ಕೊಠಡಿಗಳ ಒಳಗೆ ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ಶಮಿ ತೊಡಗುತ್ತಿದ್ದಾರೆ ಮತ್ತು ಇದರ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿದಾಗ, ಮೊಹಮ್ಮದ್ ಶಮಿ ಮತ್ತು ಅವರ ಕುಟುಂಬ ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಜಹಾನ್ ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಹಸಿನ್ ಜಹಾನ್ ಪರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ, 'ಅರ್ಜಿದಾರರು ಅದರ ವಿರುದ್ಧ ಧ್ವನಿ ಎತ್ತಿದಾಗ, ಆಕೆಯ ಪತಿ ಮತ್ತು ಆತನ ಕುಟುಂಬ ಸದಸ್ಯರು ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದರು ಮತ್ತು ಅವರು ನಿರಂತರವಾಗಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದರು' ಎಂದಿದ್ದಾರೆ. 

ವರದಕ್ಷಿಣೆಗಾಗಿ ಮೊಹಮ್ಮದ್ ಶಮಿ ತನಗೆ ಬೆದರಿಕೆ ಮತ್ತು ಕಿರುಕುಳ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಬೇಕು. ಸೆಲೆಬ್ರಿಟಿ ಸ್ಥಾನಮಾನದ ಕಾರಣದಿಂದ ಟೀಂ ಇಂಡಿಯಾ ಆಟಗಾರನಿಗೆ ಯಾವುದೇ ವಿಶೇಷ ಚಿಕಿತ್ಸೆ ನೀಡಬಾರದು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮೊಹಮ್ಮದ್ ಶಮಿ ವರ್ಸಸ್ ಹಸಿನ್ ಜಹಾನ್ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆ ನೀಡಲಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಪ್ರಗತಿ ಕಂಡಿಲ್ಲ ಮತ್ತು ಪ್ರಕರಣವು ತನ್ನ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ.

ತಿಂಗಳ ಹಿಂದೆ, ಹಸಿನ್ ಜಹಾನ್ ಅವರು ಮೊಹಮ್ಮದ್ ಶಮಿ ವಿರುದ್ಧದ ಚಾಟ್‌ಗಳನ್ನು ಬಿಡುಗಡೆ ಮಾಡಿದ್ದರು. ಅಲ್ಲಿ ಅವರು ಮಹಿಳೆಯೊಂದಿಗೆ ಲೈಂಗಿಕ ವಿಚಾರಗಳ ಸಂಭಾಷಣೆ ನಡೆಸುತ್ತಿದ್ದರು ಮತ್ತು ಮಹಿಳೆಯನ್ನು ಅವರ ಹೋಟೆಲ್ ಕೋಣೆಗೆ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಶಮಿ ಅವರು ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com