ತೆಲಂಗಾಣದಲ್ಲಿ ನಕ್ಸಲ್ ಎನ್ಕೌಂಟರ್: ಇಬ್ಬರು ಮಾವೋವಾದಿಗಳ ಹೊಡೆದುರುಳಿಸಿದ ಸೇನೆ

ತೆಲಂಗಾಣದಲ್ಲಿ ಭಾನುವಾರ ನಕ್ಸಲ್ ಎನ್ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳ ಹೊಡೆದುರುಳಿಸಿದೆ.
ನಕ್ಸಲ್ ಎನ್ ಕೌಂಟರ್
ನಕ್ಸಲ್ ಎನ್ ಕೌಂಟರ್

ಹೈದರಾಬಾದ್: ತೆಲಂಗಾಣದಲ್ಲಿ ಭಾನುವಾರ ನಕ್ಸಲ್ ಎನ್ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳ ಹೊಡೆದುರುಳಿಸಿದೆ.

ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತ್ಯೆಯಾಗಿರುವ ಘಟನೆ ಛತ್ತೀಸಗಡಕ್ಕೆ ಹೊಂದಿಕೊಂಡಿರುವ ತೆಲಂಗಾಣದ ಗಡಿ ಜಿಲ್ಲೆಯಾಗಿರುವ ಭದ್ರಾದ್ರಿ ಕೊತ್ತಾಗುಡಂ ಜಿಲ್ಲೆಯ ಅರಣ್ಯದಲ್ಲಿ ಭಾನುವಾರ ನಡೆದಿದೆ. ಗುಂಡಿನ ಚಕಮಕಿಯಲ್ಲಿ ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಗೆ ಸೇರಿದ ಇಬ್ಬರು ನಕ್ಸಲರು ಹತ್ಯೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತರನ್ನು ಚೇರ್ಲಾ ಸಂಘಟನೆಯ ರಾಜೇಶ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಿಂದ ಎರಡು ಎಸ್‌ಎಲ್‌ಆರ್ ರೈಫಲ್ ಸೇರಿದಂತೆ ಕೆಲವು ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಇತ್ತೀಚೆಗೆ ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಸ್ಪೋಟಕ ಸಿಡಿಸಿ 11 ಪೊಲೀಸರನ್ನು ಕೊಂದಿದ್ದರು.

ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿರುವ ಮಂಡಲದ ಪುಟ್ಟಪಾಡು ಅರಣ್ಯದಲ್ಲಿ ಗ್ರೇಹೌಂಡ್ಸ್ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರು ಉಪಸ್ಥಿತಿ ಕಂಡ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ನಕ್ಸಲರು ಹತರಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com