ದತ್ತುಪುತ್ರಿಗೆ ಸಿಗರೇಟಿನಿಂದ ಸುಟ್ಟು ಕಿರುಕುಳ: ಸಂಗೀತಾ-ವಲಿಯುಲ್ ಇಸ್ಲಾಂ ವೈದ್ಯ ದಂಪತಿ ಬಂಧನ; ಹಿಮಂತ ಬಿಸ್ವಾ ಶರ್ಮಾ

ದತ್ತುಪುತ್ರಿಯ ಖಾಸಗಿ ಅಂಗಗಳಿಗೆ ಸಿಗರೇಟಿನಿಂದ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಸಂಗೀತಾ ದತ್ತಾ ಮತ್ತು ಡಾ. ವಲಿಯುಲ್ ಇಸ್ಲಾಂ ವೈದ್ಯ ದಂಪತಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ವೈದ್ಯ ದಂಪತಿ
ವೈದ್ಯ ದಂಪತಿ

ಗುವಾಹಟಿ: ದತ್ತುಪುತ್ರಿಯ ಖಾಸಗಿ ಅಂಗಗಳಿಗೆ ಸಿಗರೇಟಿನಿಂದ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಸಂಗೀತಾ ದತ್ತಾ ಮತ್ತು ಡಾ. ವಲಿಯುಲ್ ಇಸ್ಲಾಂ ವೈದ್ಯ ದಂಪತಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಸಂತ್ರಸ್ತೆ ಅಪ್ರಾಪ್ತ ಬಾಲಕಿಯ ಅಗತ್ಯ ವೈದ್ಯಕೀಯ ಪರೀಕ್ಷೆಯ ನಂತರ ಇದು ದೃಢಪಟ್ಟಿದೆ. ಸೂಕ್ಷ್ಮವಾಗಿ ನಿಗಾ ವಹಿಸಲಾಗಿದೆ. ಇನ್ನು 30-45 ದಿನಗಳೊಳಗೆ ಆರೋಪಪಟ್ಟಿ ಸಲ್ಲಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಪ್ರಕರಣದ ಕುರಿತು ದಿನನಿತ್ಯ ನಿಗಾ ವಹಿಸುತ್ತಿದ್ದೇನೆ. ಅಲ್ಲದೆ ಆರು ತಿಂಗಳೊಳಗೆ ಪ್ರಕರಣ ಇತ್ಯರ್ಥಕ್ಕೆ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಶನಿವಾರ ಗುವಾಹಟಿಯಲ್ಲಿ ವೈದ್ಯರು ಮತ್ತು ಅವರ ಕುಟುಂಬದ ಮನೆಯ ಕೆಲಸದವನನ್ನು ಬಂಧಿಸಲಾಯಿತು. ವೈದ್ಯ ದಂಪತಿ ಮತ್ತು ಮನೆ ಕೆಲಸದವಳ ವಿರುದ್ಧ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಜೊತೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಅವರನ್ನು ಬಂಧಿಸಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವೈದ್ಯ ದಂಪತಿಗೆ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮತ್ತು ಸೇವಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಮಾತನಾಡಿ, ಅಪ್ರಾಪ್ತ ಬಾಲಕಿಯನ್ನು ವೈದ್ಯ ದಂಪತಿಗಳ ನಿವಾಸವಾದ ರೋಮಾ ಎನ್‌ಕ್ಲೇವ್‌ನ ನಾಲ್ಕನೇ ಮಹಡಿಯಲ್ಲಿ ಬಂಧಿಯಾಗಿರಿಸಲಾಗಿತ್ತು. ನಾಲ್ಕು ವರ್ಷದ ಬಾಲಕಿಯ ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳು ಮತ್ತು ದೇಹದ ಹಲವು ಭಾಗಗಳಲ್ಲಿ ಮೂಗೇಟುಗಳು ಕಂಡುಬಂದಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟು ಹಾಕಿರುವುದು ಕೂಡ ಪತ್ತೆಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com