ಗುಜರಾತ್‌ನಲ್ಲಿ ಮಹಿಳೆಯರು ನಾಪತ್ತೆ: 39 ಸಾವಿರ ಮಂದಿ ಹಿಂತಿರುಗಿದ್ದಾರೆ, 2,124 ಮಂದಿ ಪತ್ತೆ ಸಾಧ್ಯವಾಗಿಲ್ಲ; ಪೊಲೀಸರು

ಗುಜರಾತ್‌ನಲ್ಲಿ ಕಾಣೆಯಾದ 41,621 ಮಹಿಳೆಯರ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವೈರಲ್ ಆದ ನಂತರ, ರಾಜ್ಯ ಸರ್ಕಾರದ ರಕ್ಷಣೆಗೆ ನಿಂತಿರುವ ಗುಜರಾತ್ ಪೊಲೀಸರು, ಈ ಪೈಕಿ 39,497 ಮಂದಿ ಹಿಂತಿರುಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಅಹಮದಾಬಾದ್: ಗುಜರಾತ್‌ನಲ್ಲಿ ಕಾಣೆಯಾದ 41,621 ಮಹಿಳೆಯರ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವೈರಲ್ ಆದ ನಂತರ, ರಾಜ್ಯ ಸರ್ಕಾರದ ರಕ್ಷಣೆಗೆ ನಿಂತಿರುವ ಗುಜರಾತ್ ಪೊಲೀಸರು, ಈ ಪೈಕಿ 39,497 ಮಂದಿ ಹಿಂತಿರುಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, 2,124 ಮಹಿಳೆಯರು ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು ಪೊಲೀಸರಿಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಗಮನಾರ್ಹ ವಿಚಾರವೆಂದರೆ, ಸುದ್ದಿ ವರದಿಯಲ್ಲಿನ ಸಂಖ್ಯೆಗಳನ್ನು ಪೊಲೀಸರು ಸಮರ್ಥಿಸಿಲ್ಲ. ರಾಜ್ಯ ಸರ್ಕಾರವು 2021 ಮತ್ತು 2022 ರ ಅಂಕಿಅಂಶಗಳನ್ನು ಹಂಚಿಕೊಂಡಿಲ್ಲ. 

ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ಪ್ರಕಟಿಸಿದ ಮಾಹಿತಿಯ ಪ್ರಕಾರ, 2016-20ರ ಅವಧಿಯಲ್ಲಿ ಕಾಣೆಯಾದ 41,621 ಮಹಿಳೆಯರಲ್ಲಿ 39,497 (ಶೇ 94.90) ಮಹಿಳೆಯರನ್ನು ಪತ್ತೆಹಚ್ಚಲಾಗಿದೆ ಮತ್ತು ಅವರು ಈಗ ತಮ್ಮ ಕುಟುಂಬಗಳೊಂದಿಗೆ ಒಂದಾಗಿದ್ದಾರೆ. ಈ ಮಾಹಿತಿಯು ಕ್ರೈಮ್ ಇನ್ ಇಂಡಿಯಾ, 2020ರ ಭಾಗವಾಗಿದೆ ಎಂದು ಗುಜರಾತ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಕೌಟುಂಬಿಕ ಕಲಹ, ಪಲಾಯನ, ಪರೀಕ್ಷೆಯಲ್ಲಿ ವಿಫಲತೆ ಇತ್ಯಾದಿ ಕಾರಣಗಳಿಂದ ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ. ಆದರೆ, ನಾಪತ್ತೆ ಪ್ರಕರಣಗಳ ತನಿಖೆಯಲ್ಲಿ ಲೈಂಗಿಕ ಶೋಷಣೆ, ಅಂಗಾಂಗ ಕಳ್ಳಸಾಗಣೆ ಇತ್ಯಾದಿ ಕಳ್ಳಸಾಗಣೆ ಪ್ರಸಂಗಗಳು ಬೆಳಕಿಗೆ ಬಂದಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದಿದ್ದಾರೆ.

ಭಾರತದ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ, ಸ್ಥಳೀಯ ಪೊಲೀಸರು ಕಾಣೆಯಾದ ವ್ಯಕ್ತಿಗಳ ಪ್ರಕರಣಗಳ ತನಿಖೆಯನ್ನು ನಡೆಸುತ್ತಾರೆ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮನ್ವಯದ ಭಾಗವಾಗಿ ಇತರ ರಾಜ್ಯ ಪೊಲೀಸ್ ಘಟಕಗಳಿಂದ ಟ್ರ್ಯಾಕಿಂಗ್‌ಗಾಗಿ ಡೇಟಾವನ್ನು ಮೀಸಲಾದ ವೆಬ್‌ಸೈಟ್‌ಗೆ ನೀಡಲಾಗುತ್ತದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶವನ್ನು ಆಧರಿಸಿದ ಟಿಎನ್ಐಇ ವರದಿ ಪ್ರಕಾರ, 2016 ರಲ್ಲಿ 7,105, 2017 ರಲ್ಲಿ 7,712, 2018 ರಲ್ಲಿ 9,246 ಮತ್ತು 2019 ರಲ್ಲಿ 9,268 ಗುಜರಾತ್ ಮಹಿಳೆಯರು ಕಾಣೆಯಾಗಿದ್ದಾರೆ. 2020ರಲ್ಲಿ 8,290 ಮಹಿಳೆಯರು ಕಾಣೆಯಾಗಿದ್ದಾರೆ. ಈ ಒಟ್ಟು ಸಂಖ್ಯೆಯು 41,621 ಕ್ಕೆ ಏರಿಕೆ ಎಂದು ವದರಿಯಾಗಿದೆ.

ಪ್ರಾಸಂಗಿಕವಾಗಿ, 2021 ರಲ್ಲಿ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಅಹಮದಾಬಾದ್ ಮತ್ತು ವಡೋದರಾದಲ್ಲಿ ಕೇವಲ ಒಂದು ವರ್ಷದಲ್ಲಿ (2019-20) 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com