ಒಂದೇ ಉತ್ಪನ್ನವನ್ನು ಮಾರಲು, ಸುಳ್ಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸೋಮವಾರ ವಾಗ್ದಾಳಿ ನಡೆಸಿದ್ದು, ಒಂದೇ ಉತ್ಪನ್ನವನ್ನು ಮಾರಾಟ ಮಾಡಲು, ಅದೇ ಸುಳ್ಳನ್ನು ಪುನರಾವರ್ತಿಸಲು ಅಥವಾ ಸಾರ್ವಕಾಲಿಕ ಕೋಮು ಉದ್ವಿಘ್ನತೆ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ಸಿಕ್ಕಿರುವ ಪಾಠವಾಗಿದೆ ಎಂದಿದ್ದಾರೆ.
ಕಪಿಲ್ ಸಿಬಲ್
ಕಪಿಲ್ ಸಿಬಲ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸೋಮವಾರ ವಾಗ್ದಾಳಿ ನಡೆಸಿದ್ದು, ಒಂದೇ ಉತ್ಪನ್ನವನ್ನು ಮಾರಾಟ ಮಾಡಲು, ಅದೇ ಸುಳ್ಳನ್ನು ಪುನರಾವರ್ತಿಸಲು ಅಥವಾ ಸಾರ್ವಕಾಲಿಕ ಕೋಮು ಉದ್ವಿಘ್ನತೆ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ಸಿಕ್ಕಿರುವ ಪಾಠವಾಗಿದೆ ಎಂದಿದ್ದಾರೆ.

ಮೇ 10 ರಂದು ನಡೆದ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಕ್ರಮವಾಗಿ 66 ಮತ್ತು 19 ಸ್ಥಾನಗಳಲ್ಲಿ ಜಯ ಸಾಧಿಸಿದವು.

ಟ್ವೀಟ್‌ನಲ್ಲಿ ಸಿಬಲ್, 'ಕರ್ನಾಟಕದ ಚುನಾವಣೆಯ ಫಲಿತಾಂಶದಿಂದ ಸಿಕ್ಕಿದ ಪಾಠವೆಂದರೆ, ಒಂದೇ ಉತ್ಪನ್ನವನ್ನು ಮಾರಾಟ ಮಾಡಲು, ಅದೇ ಸುಳ್ಳನ್ನು ಪುನರಾವರ್ತಿಸಲು, ವಿಷವನ್ನು ಉಗುಳಲು, ಹಿಂದಿನದನ್ನು ನಿಂದಿಸಲು, ಭ್ರಷ್ಟ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಲು ಮತ್ತು ಇತರರನ್ನು ಭ್ರಷ್ಟರೆಂದು ಕರೆಯಲು, ಎಲ್ಲಾ ಕಾಲದಲ್ಲೂ ಕೋಮು ಕಾರ್ಡ್ ಪ್ಲೇ ಮಾಡಲು ನಿಮಗೆ ಸಾಧ್ಯವಿಲ್ಲ' ಎಂದಿದ್ದಾರೆ. 

ಭಾನುವಾರ ಟ್ವೀಟ್ ಮಾಡಿದ್ದ ಸಿಬಲ್, ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯರಹಿತ ಆಡಳಿತ ನಡೆಸಿ ಕಾಂಗ್ರೆಸ್ 'ಜನರ ಹೃದಯವನ್ನು ಗೆಲ್ಲಬೇಕು' ಎಂದು ಒತ್ತಾಯಿಸಿದ್ದರು.

ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಅವರು ಇತ್ತೀಚೆಗೆ ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶದಿಂದ ಚುನಾವಣೇತರ ವೇದಿಕೆ 'ಇನ್ಸಾಫ್' ಅನ್ನು ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com