ಕರ್ನಾಟಕದ ಮುಖ್ಯಮಂತ್ರಿ ಆಯ್ಕೆಯ ವಿಳಂಬ ಪ್ರಶ್ನಿಸಿದ ಬಿಜೆಪಿ; ಅಸ್ಸಾಂ, ಉತ್ತರ ಪ್ರದೇಶ ಉಲ್ಲೇಖಿಸಿ ಕಾಂಗ್ರೆಸ್ ವಾಗ್ದಾಳಿ

ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಬುಧವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತು. ಚುನಾವಣೆಯಲ್ಲಿ ಗೆದ್ದ ಹಲವು ದಿನಗಳ ನಂತರ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಗಳನ್ನು ಘೋಷಿಸಿದ ಉದಾಹರಣೆಗಳನ್ನು ಉಲ್ಲೇಖಿಸಿ ಟೀಕಿಸಿದೆ.
ಜೈರಾಂ ರಮೇಶ್
ಜೈರಾಂ ರಮೇಶ್

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಬುಧವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತು. ಚುನಾವಣೆಯಲ್ಲಿ ಗೆದ್ದ ಹಲವು ದಿನಗಳ ನಂತರ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಗಳನ್ನು ಘೋಷಿಸಿದ ಉದಾಹರಣೆಗಳನ್ನು ಉಲ್ಲೇಖಿಸಿ ಟೀಕಿಸಿದೆ.

'ವಿಶೇಷವಾಗಿ ಪ್ರಧಾನ ಮಂತ್ರಿಯವರ ಡ್ರಮ್-ಬೀಟರ್‌ಗಳ ನೆನಪುಗಳನ್ನು ರಿಫ್ರೆಶ್ ಮಾಡಲು. 2017ರ ಯುಪಿ ವಿಧಾನಸಭಾ ಚುನಾವಣಾ ಫಲಿತಾಂಶ ಮಾರ್ಚ್ 11 ರಂದು ಹೊರಬಿತ್ತು. 8 ದಿನಗಳ ನಂತರ ಅಂದರೆ ಮಾರ್ಚ್ 19 ರಂದು ಯೋಗಿ ಸಿಎಂ ಆಗಿ ನೇಮಕಗೊಂಡರು. 2021ರ ಅಸ್ಸಾಂ ವಿಧಾನಸಭಾ ಚುನಾವಣಾ ಫಲಿತಾಂಶ ಮೇ 3 ರಂದು ಪ್ರಕಟವಾಯಿತು. ಹಿಮಂತ ಬಿಸ್ವಾ ಶರ್ಮಾ ಅವರು 7 ದಿನಗಳ ನಂತರ ಅಂದರೆ ಮೇ 10 ರಂದು ಸಿಎಂ ಆದರು. ಬೇಕಿದ್ದರೆ, ಇನ್ನೂ ಅನೇಕ ಉದಾಹರಣೆಗಳಿವೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. 

ಉನ್ನತ ಹುದ್ದೆಗಾಗಿ ತೀವ್ರ ಲಾಬಿ ನಡೆಯುತ್ತಿರುವ ನಡುವೆಯೇ, ಕರ್ನಾಟಕದಲ್ಲಿ ಫಲಿತಾಂಶ ಪ್ರಕಟವಾಗಿ ಕೆಲ ದಿನಗಳೇ ಕಳೆದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಕಾಂಗ್ರೆಸ್‌ ವಿಳಂಬ ಮಾಡಿದೆ ಎಂದು ಹಲವಾರು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟಿಸಲಾಯಿತು. ಆದರೆ, ಪಕ್ಷವು ಇನ್ನೂ ತನ್ನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಅಂತಿಮಗೊಳಿಸಿಲ್ಲ ಮತ್ತು ಸಮಾಲೋಚನೆ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದ ಇಬ್ಬರು ಮುಖ್ಯಮಂತ್ರಿ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದು, ದಕ್ಷಿಣದ ರಾಜ್ಯದಲ್ಲಿ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಕುರಿತು ಪಕ್ಷವು ತೀವ್ರ ಸಮಾಲೋಚನೆ ನಡೆಸುತ್ತಿದೆ.

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ಕಾಂಗ್ರೆಸ್‌ನಲ್ಲಿ ವಿಷಾದನೀಯ ಸ್ಥಿತಿಯಿದೆ. ಅಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮನ್ನು 'ಪೋಸ್ಟ್‌ಮ್ಯಾನ್' ಎಂದು ನೋಡುತ್ತಾರೆ. ಸರ್ಕಸ್ ನೋಡಬೇಕೆ?. ಹಾಗಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ತಮ್ಮ ಸಿಎಂ ಅಭ್ಯರ್ಥಿಯ ಆಯ್ಕೆಯನ್ನು ನೋಡಿ' ಎಂದು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡೆಸುತ್ತಿರುವ ಲಾಬಿಯನ್ನು ಉಲ್ಲೇಖಿಸಿದ ಅವರು, 'ಬಿಜೆಪಿ ಕೂಡ ತನ್ನ ಸಿಎಂಗಳನ್ನು ಆಯ್ಕೆ ಮಾಡಲು ಚರ್ಚೆ ಮತ್ತು ಸಮಾಲೋಚನೆಗಳನ್ನು ನಡೆಸುತ್ತದೆ ಮತ್ತು ಆಗಾಗ್ಗೆ ಸಿಎಂಗಳ ನಡುವೆಯೂ ಅಧಿಕಾರ ಹಂಚಿಕೆಯನ್ನು ಖಚಿತಪಡಿಸಿಕೊಂಡಿದೆ' ಎಂದಿದ್ದಾರೆ.

ವಿಸ್ತೃತ ಸಮಾಲೋಚನೆಗಳ ಹೊರತಾಗಿಯೂ, ಬಿಜೆಪಿ ಆಕಾಂಕ್ಷಿಗಳು ಒಬ್ಬರ ಮೇಲೊಬ್ಬರು ಬೀಳುವುದು, ಬೆಂಬಲಿಗರನ್ನು ಒಟ್ಟುಗೂಡಿಸುವುದು ಮತ್ತು ಮಾಧ್ಯಮಗಳ ಮೂಲಕ ಪಕ್ಷಕ್ಕೆ ಮುಸುಕಿನ ಬೆದರಿಕೆ ಒಡ್ಡುವುದನ್ನು ನೀವು ಎಂದಿಗೂ ಕಾಣುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com