ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ: ಮಧ್ಯ ಪ್ರದೇಶ ಸರ್ಕಾರದಿಂದ ಹಿರಿಯ ಯಾತ್ರಾರ್ಥಿಗಳಿಗೆ ಉಚಿತ ವಿಮಾನ ಸೇವೆ

ಮಧ್ಯ ಪ್ರದೇಶ ಸರ್ಕಾರ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅಡಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಹಿರಿಯ ಯಾತ್ರಾರ್ಥಿಗಳಿಗೆ ಉಚಿತ ವಿಮಾನ ಸೇವೆ ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿ ಭಾನುವಾರ ಹೊರಹೊಮ್ಮಿದೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್ ವಿಮಾನ ನಿಲ್ದಾಣದಲ್ಲಿ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಭೇಟಿ ಮಾಡಿದರು.
ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್ ವಿಮಾನ ನಿಲ್ದಾಣದಲ್ಲಿ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಭೇಟಿ ಮಾಡಿದರು.

ಭೋಪಾಲ್: ಮಧ್ಯ ಪ್ರದೇಶ ಸರ್ಕಾರ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅಡಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಹಿರಿಯ ಯಾತ್ರಾರ್ಥಿಗಳಿಗೆ ಉಚಿತ ವಿಮಾನ ಸೇವೆ ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿ ಭಾನುವಾರ ಹೊರಹೊಮ್ಮಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್ ವಿಮಾನ ನಿಲ್ದಾಣದಲ್ಲಿ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಭೇಟಿ ಮಾಡಿದರು. ಬ್ಯಾಚ್‌ನಲ್ಲಿ 24 ಪುರುಷ ಮತ್ತು 8 ಮಹಿಳಾ ಯಾತ್ರಿಗಳಿದ್ದು, ಎಲ್ಲರೂ ಭೋಪಾಲ್‌ನಿಂದ ಮೊದಲ ವಿಮಾನ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಹೊರಟಿದೆ. ಸೋಮವಾರ ಸಂಜೆ ಯಾತ್ರಾರ್ಥಿಗಳು ಭೋಪಾಲ್‌ಗೆ ವಾಪಸ್ ಆಗಲಿದ್ದಾರೆ.

ಇಂಡಿಗೋ ವಿಮಾನವು ಪ್ರಾಜೆಕ್ಟ್, ಮುಖ್ಯಮಂತ್ರಿ (ಸಿಎಂ) ತೀರ್ಥ ದರ್ಶನ ಯೋಜನೆ ಅಡಿಯಲ್ಲಿ ಟೇಕ್ ಆಫ್ ಆಗುವ ಮೊದಲು ಯಾತ್ರಾರ್ಥಿಗಳು ಹರ್ ಹರ್ ಗಂಗೆ ಘೋಷಣೆಗಳನ್ನು ಕೂಗಿದರು.

ಪ್ರಸ್ತುತ, ಪ್ರತಿ ಕುಟುಂಬದ ಒಬ್ಬ ಸದಸ್ಯರು ಈ ತೀರ್ಥಯಾತ್ರೆಗೆ ತೆರಳಲು ಅರ್ಹರಾಗಿದ್ದಾರೆ. ಶೀಘ್ರದಲ್ಲೇ, ಒಂದು ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರ ಪ್ರಯಾಣಕ್ಕೆ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com