ಮಧ್ಯ ಪ್ರದೇಶ: ಮಾಜಿ ಪ್ರಿಯಕರನ ಪತ್ನಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ ವಿರದ್ಧ ಕೇಸ್ ದಾಖಲು

ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ 34 ವರ್ಷದ ಮಹಿಳೆಯೊಬ್ಬರ ವಿರುದ್ಧ ಅವರ ಮಾಜಿ ಲಿವ್-ಇನ್ ಪಾರ್ಟನರ್ ಪತ್ನಿಯ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ವಾಲಿಯರ್: ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ 34 ವರ್ಷದ ಮಹಿಳೆಯೊಬ್ಬರ ವಿರುದ್ಧ ಅವರ ಮಾಜಿ ಲಿವ್-ಇನ್ ಪಾರ್ಟನರ್ ಪತ್ನಿಯ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಇಲ್ಲಿನ ಜನಕ್‌ಗಂಜ್ ಪ್ರದೇಶದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ ಎಂದು ಲಷ್ಕರ್ ನಗರ ಪೊಲೀಸ್ ವರಿಷ್ಠಾಧಿಕಾರಿ ಶಿಯಾಜ್ ಕೆಎಂ ಪಿಟಿಐಗೆ ತಿಳಿಸಿದ್ದಾರೆ.

ಸಂತ್ರಸ್ತೆಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

"ಸಂತ್ರಸ್ತೆಯ ಪತಿಯ ದೂರಿನ ಆಧಾರದ ಮೇಲೆ ನಾವು ಮಹಿಳೆಯ ವಿರುದ್ಧ ಆಸಿಡ್ ಎರಚಿದ ಆರೋಪವನ್ನು ದಾಖಲಿಸಿದ್ದೇವೆ. ಏತನ್ಮಧ್ಯೆ, ಸಂತ್ರಸ್ತೆಯ 36 ವರ್ಷದ ಪತಿ 2018 ರಿಂದ ತನ್ನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿ ಮಹಿಳೆ ಆರೋಪಿಸಿರುವುದಾಗಿ" ಅಧಿಕಾರಿ ತಿಳಿಸಿದ್ದಾರೆ.

ಆಸಿಡ್ ಘಟನೆ ಮತ್ತು ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಎಸ್ಪಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com