ಆಪ್-ಕೇಂದ್ರದ ನಡುವಿನ ತಿಕ್ಕಾಟದ ನಡುವೆ ಇಂದು ಮಮತಾ-ಕೇಜ್ರಿವಾಲ್ ಭೇಟಿ

2024 ರ ಲೋಕಸಭಾ ಚುನಾವಣೆ ತಯಾರಿಯ ಭಾಗವಾಗಿ ದೇಶಾದ್ಯಂತ ವಿವಿಧ ಹಂತಗಳಲ್ಲಿ ವಿಪಕ್ಷಗಳ ಸಭೆಗಳು ನಡೆಯುತ್ತಿದೆ. 
ಅರವಿಂದ್ ಕೇಜ್ರಿವಾಲ್- ಮಮತಾ ಬ್ಯಾನರ್ಜಿ
ಅರವಿಂದ್ ಕೇಜ್ರಿವಾಲ್- ಮಮತಾ ಬ್ಯಾನರ್ಜಿ

ನವದೆಹಲಿ: 2024 ರ ಲೋಕಸಭಾ ಚುನಾವಣೆ ತಯಾರಿಯ ಭಾಗವಾಗಿ ದೇಶಾದ್ಯಂತ ವಿವಿಧ ಹಂತಗಳಲ್ಲಿ ವಿಪಕ್ಷಗಳ ಸಭೆಗಳು ನಡೆಯುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಕೇಜ್ರಿವಾಲ್ ಇಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ
 
ಕೋಲ್ಕತ್ತಾದ ನಬನ್ನಾದಲ್ಲಿರುವ ಸಚಿವಾಲಯದಲ್ಲಿ ಉಭಯ ನಾಯಕರೂ ಭೇಟಿ ನಡೆದಿದೆ. ಇತ್ತೀಚೆಗೆ ದೆಹಲಿಯ ಆಡಳಿತಾತ್ಮಕ ನಿರ್ಣಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಈ ಆದೇಶದ ಬೆನ್ನಲ್ಲೆ ಕೇಜ್ರಿವಾಲ್ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಆಮ್ ಆದ್ಮಿ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ಪಕ್ಷ, ದೆಹಲಿಯ ಆಡಳಿತಾತ್ಮಕ ನಿರ್ಣಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ತಾತ್ವಿಕವಾಗಿ ಒಪ್ಪುವುದಾಗಿ ಹೇಳಿದೆ. ಆದರೆ ಸಂಸತ್ತಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ವಿಚಾರವಾಗಿ ತಮ್ಮ ನಿಲುವಿನ ಬಗ್ಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವುದಾಗಿ ಹೇಳಿದೆ. 2024 ರಲ್ಲಿ ಬಿಜೆಪಿಯನ್ನು ಎದುರಿಸುವ ಬಗ್ಗೆ ಮಮತಾ ಬ್ಯಾನರ್ಜಿ-ಕೇಜ್ರಿವಾಲ್ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com