ಕೇಜ್ರಿವಾಲ್ ನಿವಾಸದ ನವೀಕರಣಕ್ಕೆ 52 ಕೋಟಿ ರೂ. ವೆಚ್ಚ: ಲೆಫ್ಟಿನೆಂಟ್ ಗವರ್ನರ್‌ಗೆ ವರದಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣಕ್ಕೆ ಒಟ್ಟು 52.71 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ದೆಹಲಿ ಸರ್ಕಾರದ ವಿಜಿಲೆನ್ಸ್ ಡೈರೆಕ್ಟರೇಟ್, ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದ 'ಸತ್ಯಾಂಶ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣಕ್ಕೆ ಒಟ್ಟು 52.71 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ದೆಹಲಿ ಸರ್ಕಾರದ ವಿಜಿಲೆನ್ಸ್ ಡೈರೆಕ್ಟರೇಟ್, ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದ 'ಸತ್ಯಾಂಶ ವರದಿ'ಯಲ್ಲಿ ತಿಳಿಸಿದೆ ಎಂದು ಗುರುವಾರ ಅಧಿಕೃತ ಮೂಲಗಳು ತಿಳಿಸಿವೆ.

ಒಟ್ಟು 52.71 ಕೋಟಿ ರೂ. ವೆಚ್ಚದಲ್ಲಿ 33.49 ಕೋಟಿ ರೂ. ಮನೆ ನಿರ್ಮಾಣಕ್ಕೆ ಮತ್ತು ಮುಖ್ಯಮಂತ್ರಿಗಳ ಶಿಬಿರ ಕಚೇರಿಗೆ 19.22 ಕೋಟಿ ವೆಚ್ಚ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ) ದಾಖಲೆಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಭಾರತೀಯ ಜನತಾ ಪಕ್ಷ ಕಳೆದ ಒಂಬತ್ತು ವರ್ಷಗಳಿಂದ ಕೇಜ್ರಿವಾಲ್ ಅವರ ಪ್ರತಿಷ್ಠೆಯನ್ನು ಕೆಡಿಸುವ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಇದೀಗ ಮುಖ್ಯಮಂತ್ರಿ ನಿವಾಸವನ್ನು ಗುರಿಯಾಗಿರಿಸಿಕೊಳ್ಳುತ್ತಿರುವುದು 'ದುರದೃಷ್ಟಕರ' ಎಂದು ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದೆ.

'ಅಪರಾಧ ಎಸಗಲಾಗಿದೆ ಎಂದು ಹೇಳಲು ವರದಿಯಲ್ಲಿ ಏನೂ ಇಲ್ಲ. ದೆಹಲಿಯಲ್ಲಿ ಮುಖ್ಯಮಂತ್ರಿ ನಿವಾಸ, ಕಚೇರಿ ಸಚಿವಾಲಯ, ಸಭಾಂಗಣ ಮತ್ತು ಸಿಬ್ಬಂದಿ ಕ್ವಾರ್ಟರ್ಸ್ ಒಳಗೊಂಡ ಅಧಿಕೃತ ನಿವಾಸ ಸಂಕೀರ್ಣವನ್ನು ರಚಿಸಿರುವುದು ಇದೇ ಮೊದಲು' ಎಂದು ಎಎಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com