
ಪ್ರತ್ಯಕ್ಷ ದೃಶ್ಯ
ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಯುವಕನೊಬ್ಬ ತನ್ನ ಮಡಿಲಲ್ಲಿ ಕೂರಿಸಿಕೊಂಡು ಬೈಕ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವೀಡಿಯೋ ನೋಡಿದ ನಂತರ ಜನರು ಇದನ್ನು ಪ್ರೀತಿಯ ಪರಾಕಾಷ್ಠೆ ಎಂದು ಕರೆಯುತ್ತಿದ್ದಾರೆ. ಲಖನೌ ಪೊಲೀಸರಿಂದ ಕ್ರಮಕ್ಕೆ ಒತ್ತಾಯಿಸಲಾಗುತ್ತಿದ್ದು ಈ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಖನೌ ಅಲಿಗಂಜ್ ಪ್ರದೇಶದ ನಿರಾಲಾ ನಗರದ ಸೇತುವೆ ಎಂದು ಹೇಳಲಾದ ವೀಡಿಯೊ ವೈರಲ್ ಆಗುತ್ತಿದೆ. ಐದು ಸೆಕೆಂಡುಗಳ ಈ ವೀಡಿಯೊದಲ್ಲಿ, ಯುವಕ ಮತ್ತು ಹುಡುಗಿ ಚಲಿಸುವ ಬುಲೆಟ್ ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವುದು ಸೆರೆಯಾಗಿದೆ.
ಯುವಕ ಬೈಕ್ ಚಲಾಯಿಸುತ್ತಿದ್ದು, ಯುವತಿಯು ಯುವಕನ ತೊಡೆಯ ಮೇಲೆ ಕುಳಿತುಕೊಂಡಿರುವುದು ಕಂಡು ಬಂದಿದೆ. ಈ ಮೂಲಕ ತಮ್ಮ ಪ್ರಾಣವನ್ನು ಮಾತ್ರವಲ್ಲದೆ ಇತರರ ಪ್ರಾಣವನ್ನೂ ಅಪಾಯಕ್ಕೆ ತಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.
लखनऊ : नवाबों के शहर में मोहब्बत के नवाबी शौक
— Ayush suryavanshi (@A_suryavanshi_) May 28, 2023
अलीगंज के निराला नगर पुल का वीडियो@lkopolice pic.twitter.com/1QCzTMF2Bq