'22ಕ್ಕಿಂತ ಹೆಚ್ಚು ಆಟಗಾರರು ಆಡುತ್ತಿದ್ದಾರೆ..' ಐಪಿಎಲ್‌ ಫೈನಲ್‌ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಆರ್ಡರ್:‌  Swiggy ಟ್ವೀಟ್‌ Viral

ಐಪಿಎಲ್ 2023ರ ಫೈನಲ್ ಪಂದ್ಯದ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಗಳ ಆರ್ಡರ್ ಬಂದಿತ್ತು ಎಂದು ಖ್ಯಾತ ಜನಪ್ರಿಯ ಫುಡ್‌ ಡೆಲಿವರಿ ಸೇವಾ ಸಂಸ್ಥೆ ಸ್ವಿಗ್ಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಐಪಿಎಲ್ 2023ರ ಫೈನಲ್ ಪಂದ್ಯದ ವೇಳೆ 2423ಕ್ಕೂ ಹೆಚ್ಚು ಕಾಂಡೋಮ್‌ ಗಳ ಆರ್ಡರ್ ಬಂದಿತ್ತು ಎಂದು ಖ್ಯಾತ ಜನಪ್ರಿಯ ಫುಡ್‌ ಡೆಲಿವರಿ ಸೇವಾ ಸಂಸ್ಥೆ ಸ್ವಿಗ್ಗಿ ಹೇಳಿದೆ.

ಹೌದು.. ಐಪಿಎಲ್‌ ನ ರೋಚಕ ಫೈನಲ್‌ ಮುಕ್ತಾಯ ಕಂಡಿದ್ದು, ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5ನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಆದರೆ ಅಚ್ಚರಿ ಅಂಶ ಎಂದರೆ ಇಡೀ ದೇಶ ಅತ್ತ ಗುಜರಾತ್ ನಲ್ಲಿ ನಡೆಯುತ್ತಿದ್ದ ಫೈನಲ್ ಪಂದ್ಯದತ್ತ ಗಮನ ನೆಟ್ಟಿದ್ದರೆ ಇತ್ತ ಸ್ವಿಗ್ಗಿ ಮಾರ್ಟ್ ನಲ್ಲಿ 2423ಕ್ಕೂ ಹೆಚ್ಚು ಕಾಂಡೋಮ್‌ ಗಳ ಆರ್ಡರ್ ಗಳು ಬಂದಿತ್ತು. ಈ ಬಗ್ಗೆ ಸ್ವತಃ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ.

ಫೈನಲ್ ಪಂದ್ಯವನ್ನು ವೀಕ್ಷಿಸಲು ಮಳೆಯನ್ನು ಲೆಕ್ಕಿಸದೇ 75 ಸಾವಿರ ಮಂದಿ ಸ್ಟೇಡಿಯಂಗೆ ಬಂದಿದ್ದರು. ಪಂದ್ಯದ ವೇಳೆ ಪ್ರತಿ ನಿಮಿಷಕ್ಕೆ 212 ಬಿರಿಯಾನಿಗಳು ಆರ್ಡರ್‌ ಆಗಿವೆ. ಒಟ್ಟು 12 ಮಿಲಿಯನ್‌ ಬಿರಿಯಾನಿಗಳು ಫೈನಲ್‌ ಪಂದ್ಯದ ವೇಳೆ ಆರ್ಡರ್‌ ಆಗಿವೆ. ಅಂತೆಯೇ ಪಂದ್ಯ ನಡೆಯುತ್ತಿರುವಾಗ 2423ಕ್ಕೂ ಹೆಚ್ಚು ಕಾಂಡೋಮ್‌ ಆರ್ಡರ್ ಬಂದಿತ್ತು ಎಂದು ಸ್ವಿಗ್ಗಿ ಟ್ವೀಟ್‌ ಮಾಡಿದೆ. ಸ್ವಿಗ್ಗಿ ಆ್ಯಪ್ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಇದುವರೆಗೆ 2423 ಕಾಂಡೋಮ್‌ಗಳನ್ನು ವಿತರಿಸಲಾಗಿದೆ. ಇಂದು ರಾತ್ರಿ 22 ಕ್ಕಿಂತ ಹೆಚ್ಚು ಆಟಗಾರರು ಆಡುತ್ತಿರುವಂತೆ ತೋರುತ್ತಿದೆ ಎಂದು ಕಾಂಡೋಮ್‌ ಕಂಪೆನಿಯೊಂದನ್ನು ಟ್ಯಾಗ್‌ ಮಾಡಿ ಸ್ವಿಗ್ಗಿ ಟ್ವೀಟ್‌ ಮಾಡಿದೆ. ಈ ಟ್ವೀಟ್‌  793.3 ಲಕ್ಷ ಜನರಿಗೆ ತಲುಪಿದ್ದು, 8,878 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ.

“ಇದು ಸ್ವಿಗ್ಗಿಯ ನಿಜವಾದ ಮಟ್ಟ” ಎಂದು ಒಬ್ಬರು ರಿಟ್ವೀಟ್‌ ಮಾಡಿದ್ದಾರೆ. “ನನಗೆ 22 ಆಟಗಾರರ ಬಗ್ಗೆ ತಿಳಿದಿಲ್ಲ, ಆದರೆ ಇತರ 2423 ಆಟಗಾರರು ನಿಜವಾಗಿಯೂ ಸುರಕ್ಷಿತವಾಗಿ ಆಡುತ್ತಿದ್ದಾರೆ” ಎಂದು ಕಮೆಂಟ್‌ ಮಾಡಿದ್ದಾರೆ. “ಈ ಅಂಕಿಅಂಶಗಳನ್ನು ನೋಡಿದ ಬಳಿಕ ಸಿಂಗಲ್ಸ್‌ ಒಂದು ಬದಿಯಲ್ಲಿ ಕೂತು  ಅಳುತ್ತಾರೆ”  ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com