ಮಸೀದಿ ಮಂದಿರಗಳಿಗೆ ಭೇಟಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ: ಕಮಲ್ ನಾಥ್

ಮಸೀದಿ, ಮಂದಿರಗಳಿಗೆ ಭೇಟಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾವುದಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿದ್ದಾರೆ. 
ಕಮಲ್ ನಾಥ್
ಕಮಲ್ ನಾಥ್

ಭೋಪಾಲ್: ಮಸೀದಿ, ಮಂದಿರಗಳಿಗೆ ಭೇಟಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾವುದಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿದ್ದಾರೆ. 

ಹೂಡಿಕೆಯಿಂದ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದು, ಬಿಜೆಪಿ ಅವಧಿಯಲ್ಲಿ ರಾಜ್ಯ ಹೂಡಿಕೆ ಆಕರ್ಷಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಬಿಜೆಪಿ ಆಡಳಿತದಲ್ಲಿ ಯಾರಿಗೂ ನಂಬಿಕೆ ಇಲ್ಲ ಎಂದು ಆರೋಪಿಸಿದ್ದಾರೆ.

ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್,  ಇಲ್ಲಿನ ಯುವಕರನ್ನು ಉದ್ಯೋಗವಿಲ್ಲದೇ ನೋಡುವುದು ನೋವುಂಟು ಮಾಡುತ್ತಿದೆ. ಯುವಕರು ಮಧ್ಯಪ್ರದೇಶದ ಭವಿಷ್ಯ. ಇದು ಯುವಕರ ಭವಿಷ್ಯವಾದರೆ ಮಧ್ಯಪ್ರದೇಶದ ಭವಿಷ್ಯವೇನು? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು, ನ.17 ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಯುವಕರು, ವ್ಯಾಪಾರ ಅವಕಾಶಗಳಿಲ್ಲದ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ, ಭ್ರಷ್ಟಾಚಾರ ಮತ್ತು ಹಗರಣಗಳಿಂದ ಬಳಲುತ್ತಿದ್ದಾರೆ. ಅವರ ಕೈಗಳಿಗೆ ಕೆಲಸ ಬೇಕು ಮತ್ತು ರಾಜ್ಯಕ್ಕೆ ಬಂಡವಾಳ ಬರುವವರೆಗೆ ಅದು ಬರುವುದಿಲ್ಲ" ಎಂದು ಕಮಲ್ ನಾಥ್ ಹೇಳಿದರು.

"ಮಂದಿರ ಮತ್ತು ಮಸೀದಿಗೆ ಹೋಗುವುದರಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ, ಹೂಡಿಕೆಗಳು ಆರ್ಥಿಕ ಚಟುವಟಿಕೆಗಳನ್ನು ತರುತ್ತವೆ ಆದರೆ ಯುವಕರಿಗೆ ಉದ್ದೇಶಿಸಿರುವ ಯೋಜನೆಗಳು ಮೋಸದಿಂದ ಕೂಡಿರಬಾರದು. ಆದರೆ ಈ ಆಡಳಿತದಲ್ಲಿ 50 ಪರ್ಸೆಂಟ್ ಕಮಿಷನ್ ಚಾಲ್ತಿಯಲ್ಲಿದ್ದರೆ, ಯೋಜನೆಗಳು ಏನು ಒಳ್ಳೆಯದು ಮಾಡುತ್ತವೆ ಎಂದು ಕಮಲ್ ನಾಥ್ ಪ್ರಶ್ನಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com