ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸಾಚಾರದ ವಿಡಿಯೋ, ಫೋಟೊಗಳ ಪ್ರಸಾರದ ವಿರುದ್ಧ ಕ್ರಮ: ಮಣಿಪುರ ಸರ್ಕಾರ

ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ ಹಿಂಸಾಚಾರದ ವಿಡಿಯೋಗಳು ಮತ್ತು ಫೋಟೊಗಳ ಪ್ರಸಾರವನ್ನು ಮಣಿಪುರ ಸರ್ಕಾರ ನಿಷೇಧಿಸಿದೆ. ವ್ಯಕ್ತಿಯೊಬ್ಬನನ್ನು ಸುಟ್ಟು ಹಾಕುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ಆಕ್ರೋಶ ಮತ್ತು ಖಂಡನೆಗೆ ಗುರಿಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ನಿರ್ದೇಶನ ಬಂದಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಗುವಾಹಟಿ: ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ ಹಿಂಸಾಚಾರದ ವಿಡಿಯೋಗಳು ಮತ್ತು ಫೋಟೊಗಳ ಪ್ರಸಾರವನ್ನು ಮಣಿಪುರ ಸರ್ಕಾರ ನಿಷೇಧಿಸಿದೆ. ವ್ಯಕ್ತಿಯೊಬ್ಬನನ್ನು ಸುಟ್ಟು ಹಾಕುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ಆಕ್ರೋಶ ಮತ್ತು ಖಂಡನೆಗೆ ಗುರಿಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ನಿರ್ದೇಶನ ಬಂದಿದೆ. 

ಈ ವಿಡಿಯೋ ಸಿಬಿಐ ತನಿಖೆ ನಡೆಸುತ್ತಿರುವ ಮೇ 4ರ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಪೊಲೀಸರು ಹೇಳಿದ್ದರು.

ರಾಜ್ಯದಲ್ಲಿ ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗೊಂದಲದ ಮತ್ತು ಹಿಂಸಾತ್ಮಕ ವಿಷಯಗಳ ವಿಡಿಯೋಗಳು ಮತ್ತು ಫೋಟೊಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಬುಧವಾರ ರಾತ್ರಿ ಈ ಆದೇಶ ಹೊರಡಿಸಲಾಗಿದೆ.

'ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ವ್ಯಕ್ತಿಗೆ ಹಾನಿ ಅಥವಾ ಗಾಯ ಅಥವಾ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯನ್ನುಂಟುಮಾಡುವುದು ಅಥವಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಬಹುದಾದಂತ ವಿಚಾರಗಳ ಹರಡುವಿಕೆಯನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಮತ್ತು ಅತ್ಯಂತ ಸೂಕ್ಷ್ಮತೆಯಿಂದ ವೀಕ್ಷಿಸುತ್ತದೆ' ಎಂದು ರಾಜ್ಯ ಗೃಹ ಸಚಿವಾಲಯದ ಆದೇಶ ತಿಳಿಸಿದೆ.

'ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಅಂತಹ ವಿಡಿಯೋಗಳು ಅಥವಾ ಚಿತ್ರಗಳನ್ನು ಪ್ರಸಾರ ಮಾಡಲು ಅಥವಾ ಹರಡಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ಒಂದು ವೇಳೆ, ಯಾವುದೇ ವ್ಯಕ್ತಿ ಈ ರೀತಿ ಮಾಡಿದ್ದು ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಬಹುದು ಮತ್ತು ಸೂಕ್ತ ಕಾನೂನು ತೆಗೆದುಕೊಳ್ಳಲು ದೂರು ನೀಡಬಹುದು' ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಈ ಆದೇಶವು ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಸರ್ಕಾರ ಹೇಳಿದೆ. ಅಕ್ಟೋಬರ್ 16 ರವರೆಗೆ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com