ಸೂರ್ಯನ ಕಕ್ಷೆಯತ್ತ ಆದಿತ್ಯಾ ಎಲ್ 1 ದಾಪುಗಾಲು; ಮಾರ್ಗ ಮಧ್ಯೆಯೇ ಸೆಲ್ಫಿ; ಭೂಮಿ, ಚಂದ್ರನ ಫೋಟೋ ಕ್ಲಿಕ್!
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಸೂರ್ಯ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆ ಸೂರ್ಯನ ಕಕ್ಷೆಯತ್ತ ದಾಪುಗಾಲಿರಿಸಿದ್ದು, ಇದೀಗ ಮಾರ್ಗ ಮಧ್ಯೆಯೇ ಸೆಲ್ಫಿ ಕ್ಲಿಕ್ಕಿಸಿ ಭೂಮಿ, ಚಂದ್ರನ ಫೋಟೋ ರವಾನಿಸಿದೆ.
Published: 07th September 2023 12:33 PM | Last Updated: 07th September 2023 01:35 PM | A+A A-

ಆದಿತ್ಯಾ ಎಲ್ 1
ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಸೂರ್ಯ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆ ಸೂರ್ಯನ ಕಕ್ಷೆಯತ್ತ ದಾಪುಗಾಲಿರಿಸಿದ್ದು, ಇದೀಗ ಮಾರ್ಗ ಮಧ್ಯೆಯೇ ಸೆಲ್ಫಿ ಕ್ಲಿಕ್ಕಿಸಿ ಭೂಮಿ, ಚಂದ್ರನ ಫೋಟೋ ರವಾನಿಸಿದೆ.
ಹೌದು.. ಆದಿತ್ಯ-ಎಲ್ 1, ಇಂದು ಭೂಮಿಯ ಚಿತ್ರಗಳನ್ನು ಕಳುಹಿಸಿದ್ದು, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಗೆ ಹೋಗುತ್ತಿರುವಾಗ ಚಂದ್ರ ಮತ್ತು ಭೂಮಿಯ ಚಿತ್ರಗಳನ್ನು ಕ್ಲಿಕ್ಕಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ.
Aditya-L1 Mission:
Onlooker!
Aditya-L1,
destined for the Sun-Earth L1 point,
takes a selfie and
images of the Earth and the Moon.#AdityaL1 pic.twitter.com/54KxrfYSwy— ISRO (@isro) September 7, 2023
ಇದನ್ನೂ ಓದಿ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆದಿತ್ಯಾ ಎಲ್ 1 ಸೂರ್ಯನನ್ನು ಮುಟ್ಟುತ್ತದೆಯೇ? ಇಲ್ಲಿದೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ!
ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆಯನ್ನು ಹೊತ್ತಿದ್ದ ಪಿಎಸ್ ಎಲ್ ವಿ ಸಿ 57 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿ ನೌಕೆಯನ್ನು ಕಕ್ಷೆಯಲ್ಲಿ ಬಿಟ್ಟಿತ್ತು. ಬಳಿಕ ಆದಿತ್ಯಾ ಎಲ್ 1 ನೌಕೆಯು ತನ್ನ ಗಮ್ಯ ಸ್ಥಾನದತ್ತ ಪ್ರಯಾಣ ಮುಂದುವರೆಸಿದೆ. ಬಾಹ್ಯಾಕಾಶ ನೌಕೆಯು ಈಗಾಗಲೇ ಎರಡು ಭೂಮಿಗೆ ಸುತ್ತುವರಿದ ಕಕ್ಷೆಯ ಕುಶಲತೆಯನ್ನು ಪೂರ್ಣಗೊಳಿಸಿದೆ ಮತ್ತು ಲ್ಯಾಗ್ರೇಂಜ್ ಪಾಯಿಂಟ್ L1 ಕಡೆಗೆ ವರ್ಗಾವಣೆ ಕಕ್ಷೆಯಲ್ಲಿ ಇರಿಸುವ ಮೊದಲು ಇನ್ನೆರಡು ಸುತ್ತನ್ನು ನಿರ್ವಹಿಸುತ್ತದೆ. ಆದಿತ್ಯ-L1 125 ದಿನಗಳ ನಂತರ L1 ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಚಂದ್ರಯಾನ 3 ಉಡಾವಣೆ ಮಾಡಿದ ತಿಂಗಳ ಅವಧಿಯೊಳಗೆ ಇಸ್ರೋ ಮತ್ತೊಂದು ಬಾಹ್ಯಾಕಾಶ ನೌಕೆ ಆದಿತ್ಯಾ ಎಲ್ 1 ಅನ್ನು ಉಡ್ಡಯನ ಮಾಡಿತ್ತು. ಅಂತೆಯೇ ಇಸ್ರೋ ಈಗಾಗಲೇ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದು, 2025 ರ ವೇಳೆಗೆ ಮೊದಲ ಬಾರಿಗೆ ಗಗನಯಾತ್ರಿಗಳನ್ನು ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.